ಮಲ್ಲು ಬೆಡಗಿ ಭಾವನಾಗೆ ಬೆಂಗಳೂರಿನಲ್ಲಿ ಬಂಗಲೆ ಬೇಕಂತೆ

By Rajendra

ಮಲ್ಲು ಬೆಡಗಿ ಭಾವನಾ ಗಂಟು ಮೂಟೆ ಸಮೇತ ಬೆಂಗಳೂರಿಗೆ ಬರಲು ಸಿದ್ಧತೆ ನಡೆಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಜಾಕಿ' ಚಿತ್ರದಲ್ಲಿ ಮಿಂಚಿದ್ದ ಈ ಬೆಡಗಿಗೆ ಈಗ ಕನ್ನಡದಲ್ಲಿ ಹೇರಳ ಅವಕಾಶಗಳ ಸುರಿಮಳೆಯಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಬೆಂಗಳೂರಿನಲ್ಲಿ ಈಗ ಬಂಗಲೆಯೊಂದನ್ನು ಹುಡುಕುತ್ತಿದ್ದಾರೆ.

ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಬಿಜಿಯಾಗಿದ್ದ ಈಕೆಗೆ 'ಜಾಕಿ' ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಕನ್ನಡಕ್ಕೆ ಪರಿಚಯಿಸಿದ್ದರು ದುನಿಯಾ ಸೂರಿ. ಈಗ ತಮಿಳು, ಮಲಯಾಳಂ ಸೇರಿದಂತೆ ಕನ್ನಡದಲ್ಲಿ ಅವಕಾಶಗಳು ಬರುತ್ತಿರುವ ಕಾರಣ ಬೆಂಗಳೂರಿಗೆ ಅನ್ಯಥಾ ಶರಣಂ ನಾಸ್ತಿ ಎಂದಿದ್ದಾರೆ. ಆದರೆ ಬಂದ ಎಲ್ಲ ಅವಕಾಶಗಳನ್ನು ಭಾವನಾ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಿಲ್ಲ.

ಈ ಹಿಂದೆ ದ್ವಾರಕೀಶ್ ನಿರ್ಮಿಸುತ್ತಿರುವ ಸುದೀಪ್ ಅಭಿನಯದ 'ವಿಷ್ಣುವರ್ಧನ' (ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ) ಚಿತ್ರಕ್ಕೆ ಭಾವನಾ ಸಹಿ ಹಾಕಿರುವುದಾಗಿ ಈ ಹಿಂದೆ ಸುದ್ದಿ ಇತ್ತು. ಆದರೆ ತಾನು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ ಭಾವನಾ. ಡೇಟ್ಸ್ ಹೊಂದಾಣಿಕೆಯಾಗದೆ ಇರುವುದೇ ಇದಕ್ಕೆ ಕಾರಣವಂತೆ.

More from Filmibeat

English summary
Actress Bhavana is now becomes as a busiest female artist in Kannada after the hit of her recently released Jackie with Punith Rajkumar. She is also planning to settle in Bangalore and concentrate fully in Kannada. Sources say that the actress is searching a bangalow in the City for her use.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X