ಸತ್ಯ ಇನ್ ಲವ್ ಬೆಡಗಿ ಜೆನಿಲಿಯಾ ಚಿತ್ರರಂಗಕ್ಕೆ ಗುಡ್ ಬೈ
ಫೇರ್ ಅಂಡ್ ಲವ್ಲಿ ಬೆಡಗಿ ಜೆನಿಲಿಯಾ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ. ಆಕೆ ಅಭಿನಯ ಚಿತ್ರಗಳು ಬಾಕ್ಸಾಫೀಸಲ್ಲಿಗೋತಾ ಹೊಡೆಯುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ತೆಲುಗು ಚಿತ್ರರಂಗದಲ್ಲಿ ಈಕೆಯ ಬೇಡಿಕೆ ಆರಕ್ಕೇರದೆ ಮೂರಕ್ಕಿಳಿಯದೆ ತ್ರಿಶಂಕು ಸ್ವರ್ಗದಂತಾಗಿದೆ ಎಂಬುದೂ ಮತ್ತೊಂದು ಕಾರಣ.
ಸರಿ ಇನ್ನೇನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತು ಕೂರದ ಈ ಬೆಡಗಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಆಕೆಯ ಬಹುಕಾಲದ ಬಾಯ್ ಫ್ರೆಂಡ್ ರಿತೇಶ್ ದೇಶ್ ಮುಖ್ ಕೈಹಿಡಿಯಲಿದ್ದಾರೆ ಎನ್ನುತ್ತವೆ ಮೂಲಗಳು. ಬರಿ ಲವ್, ಡವ್ವು ಎಂದು ಕಾಲಹರಣ ಮಾಡದೆ ಸೀರಿಯಸ್ಸಾಗಿ ಇಬ್ಬರು ಮದುವೆಗೆ ಸಿದ್ಧರಾಗಿದ್ದಾರಂತೆ.
ಇವರಿಬ್ಬರೂ ಇತ್ತೀಚೆಗೆ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಮದುವೆ ವಾರ್ಷಿಕೋತ್ಸವಕ್ಕೆ ಕೈಕೈ ಹಿಡಿದು ಬಂದಿದ್ದರು. ಆಗಲೇ ಬಾಲಿವುಡ್ ಇವರಿಬ್ಬರನ್ನೂ ಬಿಟ್ಟಗಣ್ಣಿನಿಂದ ನೋಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ವರ್ಷ ಇವರಿಬ್ಬರೂ ಹಾರ ಬದಲಾಯಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
More from Filmibeat
English summary
Bubbly actress Genelia is planning to quit the films soon. She is getting ready to quit films and settle down by marrying with her long time boyfriend Ritesh Deshmukh. The buzz is that Genelia and Ritesh are serious about their wedding it seems.
ಜೆನಿಲಿಯಾ ಮದುವೆ ಶಿವರಾಜ್ ಕುಮಾರ್ ಸತ್ಯ ಇನ್ ಲವ್ ವಿವಾಹ genelia marriage shiva rajkumar sathya in love wedding


Click it and Unblock the Notifications











