For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನಲ್ಲಿ ನಟಿ ನಯನತಾರಾ ಜುಂ ಜುಂ ಮಾಯ

  By Rajendra
  |

  ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಜೊತೆಗಿನ ಮದುವೆ ಢಮಾರ್ ಆದ ಮೇಲೆ ನಟಿ ನಯನತಾರಾ ಮತ್ತೆ ಫಾರ್ಮ್‌ಗೆ ಬಂದಂತಿದೆ. ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ದ ಆಕೆ ಈಗ ಮತ್ತೆ ಬಣ್ಣದ ಜಗತ್ತಿಗೆ ಅಡಿಯಿಡುತ್ತಿದ್ದಾರೆ. ಈಗ ಮತ್ತೆ ತಮ್ಮ ವೃತ್ತಿ ಜೀವನಕ್ಕೆ ಹೊಸ ಉತ್ಸಾಹ, ಹುಮ್ಮಸ್ಸಿನಿಂದ ಮರಳಿದ್ದಾರೆ.

  ತಮಿಳು ಹಾಗೂ ತೆಲುಗಿನ ತಲಾ ಒಂದೊಂದು ಚಿತ್ರಕ್ಕೆ ನಯನತಾರಾ ಸಹಿ ಹಾಕಿದ್ದಾರೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಆಕೆ ಬಾಲಿವುಡ್‌ಗೂ ಲಗ್ಗೆ ಹಾಕಲು ಮುಂದಾಗಿದ್ದಾರೆ. ಈಗಾಗಲೆ ಹಲವಾರು ಚಿತ್ರಕತೆಗಳನ್ನು ಕೇಳಿದ್ದಾರಂತೆ. ಶೀಘ್ರದಲ್ಲೇ ಯಾವುದೋ ತಮಗಿಷ್ಟವಾದ ಕತೆಗೆ ಸಹಿ ಹಾಕಿ ಜುಂ ಜುಂ ಮಾಯ ಎಂದು ಹಾಡಲಿದ್ದಾರೆ.

  ಈ ಹಿಂದೊಮ್ಮೆಯೂ ನಯನತಾರಾಗೆ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸುವ ಚಾನ್ಸ್ ಸಿಕ್ಕಿತ್ತು. ಆದರೆ ಕಾರಣಾಂತರಗಳಿಂದ ಆ ಚಾನ್ಸ್ ಜಸ್ಟ್ ಮಿಸ್ ಆಗಿತ್ತು. ಈಗ ಮತ್ತೆ ಆಕೆಯೇ ಬಾಲಿವುಡ್ ಚಿತ್ರಗಳ ಕಡೆಗೆ ಒಲವು ತೋರಿರುವುದು ವಿಶೇಷ. (ಏಜೆನ್ಸೀಸ್)

  English summary
  The latest buzz is that Nayan is planning to make her debut in Bollywood. Another buzz is that she is also listening the scripts and soon she is going to sign a Bollywood film.However nothing has been confirmed officially from Nayanatara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X