ನೇತ್ರದಾನ ಮಾಡಿದ ನಗುಮುಖ ಸುಂದರಿ ಸ್ನೇಹಾ
ದಕ್ಷಿಣ ಭಾರತದ ನಗುಮುಖ ಸುಂದರಿ ಸ್ನೇಹಾ ತಮ್ಮ ಕಣ್ಣುಗಳನ್ನು ಮಂಗಳವಾರ (ಅ.15) ಚೆನ್ನೈನಲ್ಲಿ ದಾನ ಮಾಡಿದರು. ರಾಜನ್ ಐ ಕೇರ್ ಆಸ್ಪತ್ರೆ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸ್ನೇಹಾ ಇಂದು ನೇತ್ರದಾನದ ಪತ್ರಗಳಿಗೆ ಸಹಿ ಹಾಕಿ ಸಂಬಂಧಪಟ್ಟವರಿಗೆ ದಾಖಲೆಗಳನ್ನು ಹಸ್ತಾಂತರಿಸಿದರು.
ತಮಿಳು, ತೆಲುಗು ಚಿತ್ರರಂಗದಲ್ಲಿಗುರುತಿಸಿಕೊಂಡಿರುವ ಸ್ನೇಹಾ ಹುಟ್ಟಿದ್ದು ಮುಂಬೈನಲ್ಲಾದರೂ ಬೆಳೆದದ್ದು ಮಾತ್ರ ದುಬೈನಲ್ಲಿ. ಸದಾ ಹಸನ್ಮುಖಿಯಾಗಿರುವ ಈಕೆಗೆ ಅಭಿಮಾನಿಗಳು 'ಸ್ಮೈಲ್ ಕ್ವೀನ್ ಆಫ್ ಸೌತ್ ಸಿನಿಮಾ' ಎಂಬ ಬಿರುದನ್ನು ಪ್ರಸಾದಿಸಿದ್ದಾರೆ.
ಕನ್ನಡದ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಸ್ನೇಹಾ ಅಭಿನಯಿಸಿದ್ದಾರೆ. ಸ್ನೇಹಾರ ಮಾರುಕಟ್ಟೆ ಸೆನ್ಸೆಕ್ಸ್‌ನಂತೆ ದಿಢೀರೆಂದು ಪಾತಳಕ್ಕೆ ಕುಸಿದ ಕಾರಣ, ಈಕೆ ವಿಧಿಯಿಲ್ಲದೆ ಬಿಕಿನಿ ಕ್ಲಬ್ ಸೇರಿದ್ದರು. ಸದ್ಯಕ್ಕೆ ಈಕೆಯ ಸಿನಿಮಾ ಮಾರುಕಟ್ಟೆ ಸ್ಥಿರವಾಗಿದೆ.
More from Filmibeat
English summary
Leading actress Sneha, popularly known as the smile queen of south cinema, donated her eyes today. In an simple event organised by Rajan Eye Care Hospital, the actress signed the eye donation document and handed over to the concerned persons.


Click it and Unblock the Notifications











