ಬೆತ್ತಲಾಗುವುದರಲ್ಲಿ ತಪ್ಪೇನಿದೆ, ನಾನು ರೆಡಿ: ವಿದ್ಯಾ

By Mahesh

Vidya Balan on nudity
ನಿಜಕ್ಕೂ ಇದು ವಿದ್ಯಾ ಬಾಲನ್ ಹೇಳಿದ ಮಾತೇ? ನಂಬಲಾಗುತ್ತಿಲ್ಲ. ಮೊನ್ನೆ ಇನ್ನೂ ಸ್ಲೀವ್ ಲೆಸ್ ಬ್ಲೌಸ್ ಬೇಡ ಎನ್ನುತ್ತಿದ್ದ ವಿದ್ಯಾ ನಿನ್ನೆ ನೋಡಿದ್ರೆ ಬೆತ್ತಲಾಗುವುದರಲ್ಲಿ ತಪ್ಪೇನಿದೆ, ನಾನು ರೆಡಿ ಎಂದು ಬೋಲ್ಡ್ ಆಗಿ ಹೇಳಿದ್ದಾಳೆ. ಸಿನಿಮಾ ಪಾರ್ಟಿಗೆ ಕೂಡಾ ಜರತಾರಿ ಸೀರೆ ಉಟ್ಟು ಬರುವ ಮಡಿಚೆನ್ನಿ ಬಾಯಲ್ಲಿ ಈ ಮಾತು ಹೊರಟಿರುವುದು ಚಿತ್ರದ ಪ್ರಚಾರದ ದೃಷ್ಟಿಯಿಂದ ಒಳ್ಳೆಯದೆ ಎಂದು ದ ಡರ್ಟಿ ಪಿಕ್ಚರ್ ತಂಡ ಸಂತಸ ಪಟ್ಟಿದೆ.

ಅತಿ ಹೆಚ್ಚು ಎಕ್ಸ್ ಪೋಸ್ ಮಾಡುವುದದರ ಬದಲು ನಗ್ನವಾಗಿ ಕಾಣುವುದರಲ್ಲಿ ತಪ್ಪೇನಿಲ್ಲ. ಚಿತ್ರದಲ್ಲಿ ನಗ್ನ ದೃಶ್ಯ ಅಗತ್ಯವಿದ್ದರೆ ನಾನು ರೆಡಿ ಎಂದು ವಿದ್ಯಾ ಬಾಲನ್ ಹೇಳಿದ್ದಾಳೆ. ಸ್ಕಿಲ್ ಸ್ಮಿತಾ ಪಾತ್ರವನ್ನು ಮೈಮೇಲೆ ಆವರಿಸಿಕೊಂಡಿರುವ ವಿದ್ಯಾ ಇತ್ತೀಚೆಗೆ ಸೋಪ್ ಜಾಹೀರಾತೊಂದರಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು.

ವಿದ್ಯಾಳ ಈ ಬೋಲ್ಡ್ ಆಡ್ ಅನ್ನು ಇಡೀ ಬಾಲಿವುದ್ ಕಣ್ ಕಣ್ ಬಿಟ್ಟು ನೋಡಿತ್ತು. ಈ ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಿದರೆ, ಟಾಪ್ ಲೆಸ್ ಆಗೋಕೆ ರೆಡಿ, ಸೆನ್ಸಾರ್ ಒಪ್ಪಿಗೆ ನೀಡುತ್ತಾ ಮೊದಲು ಕೇಳಿ, ಆಮೇಲೆ ನಾನು ಮಾಡಿದ ಸೀನ್ ವೇಸ್ಟ್ ಆಗಬರ್ದಲ್ಲಾ ಎಂದು ಕಿಲಕಿಲನೆ ನಗುತ್ತಿದ್ದಾಳೆ ವಿದ್ಯಾ.

ಹಾಲಿವುಡ್ ಚಿತ್ರಗಳ ಉದಾಹರಣೆ ನೀಡಿದ ವಿದ್ಯಾ, ಅನಗತ್ಯವಾಗಿ ನಗ್ನದೃಶ್ಯಗಳನ್ನು ತುರುಕಬಾರದು, ಜನಕ್ಕೆ ಅಶ್ಲೀಲತೆಗೂ ಗ್ಲಾಮರ್ ಗೂ ಇರುವ ಅಂತರ ಚೆನ್ನಾಗಿ ಗೊತ್ತಿದೆ. ನೈಜತೆ ಹತ್ತಿರವಿರುವ ದೃಶ್ಯಗಳು ಜನರನ್ನು ಬೇಗ ಮುಟ್ಟುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾಳೆ. ಸಿಲ್ಕ್ ಚಿತ್ರ ಮುಗಿಯುವಷ್ಟರಲ್ಲಿ ವಿದ್ಯಾ ಯಾವ ಪರಿ ಬದಲಾಗುತ್ತಾಳೋ ಕಾದು ನೋಡಬೇಕಿದೆ.

More from Filmibeat

English summary
Vidya Balan uttered a bold statement I don't think there is anything wrong nudity in films. The actress, who posed topless for a soap Ad recently, says she has no objection to go topless if the script demands. Vidya is doing role of Silk Smitha in the biopic 'The Dirty Picture'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X