'ಫ್ಲ್ಯಾಟ್' ನಲ್ಲಿ ಚಿಗರೆ ಕಂಗಳ ತಾರೆ ಐಂದ್ರಿತಾ ರೇ
ಚಿಗರೆ ಕಂಗಳ ತಾರೆ ಐಂದ್ರಿತಾ ರೇ ಬಾಲಿವುಡ್‌ಗೆ ಜಿಗಿದಿರುವುದು ಗೊತ್ತೇ ಇದೆ! ಆಕೆಯ ಅಭಿಮಾನಿಗಳು ಈ ಸಂಗತಿ ಇನ್ನೇನು ಮರೆತೇ ಹೋಗಿದ್ದರು. ಆದರೆ ನವೆಂಬರ್ 12ರಂದು ತೆರೆಕಂಡಿರುವ ಹಿಂದಿಯ ಹಾರರ್ ಚಿತ್ರ 'ಎ ಫ್ಲಾಟ್' ಮರೆತ ಸಂಗತಿಯನ್ನು ಮತ್ತೊಮ್ಮೆ ನೆನಪಿಸಿದೆ.
ಸಂಜಯ್ ಸೂರಿ, ಜಿಮ್ಮಿ ಷೇರ್‌ಗಿಲ್, ಕಾವೇರಿ ಝಾ, ಸಚಿನ್ ಖೇಡ್‌ಕರ್ ಮುಂತಾದವರು ಜೊತೆ ಐಂದ್ರಿತಾ ರೇ ಬೆಳ್ಳಿತೆರೆ ಅಲಂಕರಿಸಿದ್ದಾರೆ. ಚಿತ್ರದಲ್ಲಿನ ಅವರ ನಟನೆ ಬಗ್ಗೆ ಪರ್ವಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಅದರ ಹಿಂದೆಯೇ ಐಂದ್ರಿತಾ ರೇ ಬಾಲಿವುಡ್‌ನಲ್ಲಿಮಿಂಚುವ ದಿನಗಳು ದೂರದಲ್ಲಿಲ್ಲ ಎಂಬ ಪ್ರಶಂಸೆ ಮಾತುಗಳು ತೇಲಿಬಂದಿವೆ.
ಇರಲಿ ಬಿಡಿ ಇದೆಲ್ಲಾ ಐಂದ್ರಿತಾ ರೇ ಅಭಿಮಾನಿಗಳಿಗೆ ಖುಷಿ ಕೊಡುವ ಸಂಗತಿ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕ ಹೇಮಂತ್ ಮಧುಕರ್ ನವೀನ ತಂತ್ರಜ್ಞಾನ ಬಳಸಿಕೊಂಡಿರುವುದು ವಿಶೇಷವಾಗಿದೆ. ಫ್ಲ್ಯಾಟ್ ಒಂದರಲ್ಲಿ ನಡೆಯುವ ರೋಚಕ ಘಟನೆಗಳ ಸುತ್ತ ಕತೆ ರಸವತ್ತಾಗಿ ಸಾಗುವುದೇ ಚಿತ್ರದ ಕಥಾಹಂದರ.
ಐಂದ್ರಿತಾ ರೇ ಎ ಫ್ಲ್ಯಾಟ್ ಕಾವೇರಿ ಝಾ ಬಾಲಿವುಡ್ ಜಿಮ್ಮಿ ಷೇರ್‌ಗಿಲ್ ವೀರ ಪರಂಪರೆ aindrita ray a flat cauvery jha bollywood veera parampare manasaare


Click it and Unblock the Notifications