ನಟಿ ನಿಖಿತಾ ಮೇಲಿನ ನಿಷೇಧ ವಾಪಸ್

By Rajendra

ನಟ ದರ್ಶನ್ ಪ್ರಕರಣದಲ್ಲಿ ನಟಿ ನಿಖಿತಾ ಮೇಲೆ ಹೇರಿದ್ದ ಮೂರು ವರ್ಷಗಳ ನಿಷೇಧವನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಇಂದು ವಾಪಸು ಪಡೆದಿದೆ. ಗುರುವಾರ (ಸೆ.15) ಬೆಂಗಳೂರಿನ ರಾಜಾಜಿನಗರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಈ ವಿಷಯವನ್ನು ಪ್ರಕಟಿಸಿದರು.

ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿದ ನಟಿ ನಿಖಿತಾ, ತನಗೆ ತುಂಬಾ ಖುಷಿಯಾಗಿದೆ. ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವರು ನಿರ್ಮಾಪಕರ ಸಂಘದ ಏಕಪಕ್ಷೀಯ ನಿರ್ಧಾರದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

"ಇದು ನಮ್ಮ ಆತುರದ ನಿರ್ಧಾರ. ನಮ್ಮ ತಪ್ಪು ನಮಗೆ ಅರಿವಾಗಿದೆ. ನಿಖಿತಾ ನಟನೆಗೆ ನಮ್ಮ ಅಭ್ಯಂತರವಿಲ್ಲ. ನಾವು ಮಾಡಿದ್ದು ತಪ್ಪು. ಇನ್ನು ಮುಂದೆ ಯಾರನ್ನೂ ನಿಷೇಧಿಸುವುದಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ನಮಗೆ ಕಿವಿ ಹಿಂಡಿ ಬುದ್ಧಿ ಹೇಳಿದ್ದಾರೆ" ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಸಭೆಯಲ್ಲಿ ಹೇಳಿದರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Ban on actress Nikita Thukral withdrawn by Kannada film Producers' Association. Two days after Kannada star Darshan was arrested for beating up his wife, he and his family faced fresh trouble on Sunday, with the Kannada Film Producers’ Association (KFPA)imposing a three-year ban on actress Nikitha from acting in Kannada movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X