ಮೈಸೂರಿನಲ್ಲಿ ಚಿರಂಜೀವಿ, ರಾಗಿಣಿ ಯುಗಳ ಗೀತೆ
ಅದ್ದೂರಿ ನಿರ್ಮಾಪಕ ಎಂದೇ ಖ್ಯಾತರಾಗಿರುವ ರಾಮು ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ 'ಗಂಡೆದೆ' ಗಾಗಿ ಮೈಸೂರಿನ ಸುತ್ತಮುತ್ತ ಚಿತ್ರೀಕರಣ ಸಾಗಿದೆ.ಚಿತ್ರಕ್ಕಾಗಿ ''ಅಂದುಕೊಳ್ಳದೇನೆ ಎದುರಾದೆ ನೀನೇ ನಿನ್ನಂತ ಚೆಲುವೆಯ ನಾಕಾಣೆ ನಂಗೀಗ ಮನಸೆಲ್ಲಾ ನೀನೆ...''ಎಂಬ ಗೀತೆಯನ್ನು ಚಿರಂಜೀವಿ ಸರ್ಜಾ, ರಾಗಿಣಿ, ಸಹನರ್ತಕಿಯರ ಮೇಲೆ ಹರ್ಷ ನೃತ್ಯ ನಿರ್ದೇಶನದೊಂದಿಗೆ ಮುಜೀರ್ ಛಾಯಾಗ್ರಹಣದಲ್ಲಿ ಮೇಲುಕೋಟೆ, ಕರಿಘಟ್ಟ, ದೊಡ್ಡ ಆಲದಮರದ ಸುತ್ತಮುತ್ತ ನಿರ್ದೇಶಕ ಅಕುಲ್‌ಶಿವ ಚಿತ್ರಿಸಿಕೊಂಡರು.
ಚಿತ್ರದ ಚಿತ್ರೀಕರಣವು ಭರದಿಂದ ಸಾಗಿದ್ದು, ಏಪ್ರಿಲ್ ಅಂತ್ಯದಲ್ಲಿ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.ಚಿತ್ರಕ್ಕೆ ರಾಮ್‌ನಾರಾಯಣ್ ಸಂಭಾಷಣೆ, ಸಾಹಿತ್ಯ, ಚಕ್ರಿ ಸಂಗೀತ, ಮುಜೀರ್ ಛಾಯಾಗ್ರಹಣ, ಮುನಿರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಇಸ್ಮಾಯಿಲ್ ಕಲೆ, ಉಮೇಶ್ ನಿರ್ಮಾಣ ನಿರ್ವಹಣೆ ಹರ್ಷ ನೃತ್ಯವಿದೆ.
ಚಿತ್ರವನ್ನು ಅಕುಲ್‌ಶಿವ ನಿರ್ದೇಶಿಸುತ್ತಿದ್ದು ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ರಾಗಿಣಿ, ದೇವರಾಜ್, ರಮೇಶ್ ಭಟ್ ,ರಂಗಾಯಣರಘು, ಸಾಧುಕೋಕಿಲ, ಅರುಣಾ ಬಾಲ್‌ರಾಜ್, ಚಿತ್ರಾ ಶೆಣೈ, ಲಕ್ಷ್ಮಣ್, ಪವನ್, ಸಂಕೇತ್ ಕಾಶಿ ಮುಂತಾದವರಿದ್ದಾರೆ.


Click it and Unblock the Notifications











