ನಟಿ ಶ್ರುತಿ ಸುಪರ್ದಿಗೆ ಹತ್ತು ವರ್ಷದ ಮಗಳು ಗೌರಿ

ಶ್ರುತಿ ಮೂಲ ಹೆಸರು ಪ್ರಿಯದರ್ಶಿನಿ. ದ್ವಾರಕೀಶ್ ನಿರ್ಮಾಣದ 'ಶ್ರುತಿ' ಚಿತ್ರದ ಸೆಂಟಿಮೆಂಟ್ ಪಾತ್ರದ ಮೂಲಕ ಶ್ರುತಿ ಎಂದೇ ಜನಜನಿತರಾದರು. ಅಲ್ಲಿಂದ ಆರಂಭವಾದ ಶ್ರುತಿ ಬೆಳ್ಳಿತೆರೆ ಜೀವನದಲ್ಲಿ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 1998ರಲ್ಲಿ ಶ್ರುತಿ ಮತ್ತು ಮಹೇಂದರ್ ಮದುವೆಯಾಗಿದ್ದರು. ಪುರಿ ಜಗನ್ನಾಥ ಆಲಯದಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನವರಾದ ಎಸ್ ಮಹೇಂದರ್ ಅವರು ತಮಿಳಿನ ಭಾರತಿರಾಜಾ ಅವರ ಚಿತ್ರಗಳಿಂದ ಪ್ರೇರಣೆ ಪಡೆದಿದ್ದರು. 'ಪ್ರಣಯದ ಪಕ್ಷಿಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಹೇಂದರ್ ಎಂಟ್ರಿ ಕೊಟ್ಟಿದ್ದರು. ಸದ್ಯಕ್ಕೆ ಭಾರತೀಯ ಜನತಾ ಪಾರ್ಟಿಯಲ್ಲಿ ಇಬ್ಬರೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಅತ್ತ ಬಿಜೆಪಿಯ ಟೈಮು ಸರಿಯಿಲ್ಲ. (ಏಜೆನ್ಸೀಸ್)
More from Filmibeat
English summary
Actress Shruti will be in possession of 2000 plus square feet of house of S Mahender for her future. Ten years young daughter Gowri will stay with Shruti.


Click it and Unblock the Notifications











