ಸೂಪರ್ ಸ್ಟಾರ್ ರಜನಿಕಾಂತ್‍‌ಗೆ ಮತ್ತೆ ಕೈಕೊಟ್ಟ ಆರೋಗ್ಯ

By Rajendra

ಸೂಪರ್ ಸ್ಟಾರ್ ರಜನಿಕಾಂತ್‌ಗೆ ಮತ್ತೆ ಆರೋಗ್ಯ ಕೈಕೊಟ್ಟಿದೆ. ಸದ್ಯಕ್ಕೆ ಅವರ ಮಹತ್ವಾಕಾಂಕ್ಷೆಯ 'ರಾಣ' ಚಿತ್ರೀಕರಣಕ್ಕೆ ಬ್ರೇಕ್ ಹಾಕುವಂತೆ ವೈದ್ಯರು ಸೂಚಿಸಿದ್ದಾರೆ. ಇನ್ನೂ ಕೆಲವು ದಿನ ರೆಸ್ಟ್ ತೆಗೆದುಕೊಳ್ಳಿ. ಸುಧಾರಿಸಿಕೊಂಡ ಬಳಿಕವಷ್ಟೇ 'ರಾಣ' ಚಿತ್ರೀಕರಣ ಎಂದು ವೈದ್ಯರು ರಜನಿಗೆ ಷರತ್ತು ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಸೆಟ್ಟೇರಬೇಕಾಗಿದ್ದ 'ರಾಣ' ಚಿತ್ರೀಕರಣ ಜನವರಿ 2012ಕ್ಕೆ ಸೆಟ್ಟೇರಲಿದೆ. ಸೌಂದರ್ಯ ರಜನಿಕಾಂತ್ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಇಲಿಯಾನಾ ಡಿಸೋಜಾ ಚಿತ್ರದ ನಾಯಕಿಯರು. ಎ ಆರ್ ರೆಹಮಾನ್ ಸಂಗೀತ ಚಿತ್ರಕ್ಕಿದೆ.

ಈ ಹಿಂದೆ ರಜನಿಕಾಂತ್ ಅನಾರೋಗ್ಯದ ನಿಮಿತ್ತ ಸಿಂಗಪುರದಲ್ಲಿ ಚಿಕಿತ್ಸೆ ಪಡೆದಿದ್ದರು. ಸಿಂಗಪುರದಲ್ಲಿ ಆರು ವಾರಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಬಳಿಕ ಹಲವಾರು ದೇವಸ್ಥಾನಗಳಿಗೂ ಭೇಟಿ ನೀಡಿದ್ದರು. (ಏಜೆನ್ಸೀಸ್)

More from Filmibeat

English summary
Doctors advised Rajini to postpone Raana shooting few more days and take rest. Due to this, the shooting of Raana will be begins in the second week of January 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X