»   » ಕನಸಿನ ಕನ್ಯೆಯ ಸೌಂದರ್ಯ ರಹಸ್ಯವೇನು?!

ಕನಸಿನ ಕನ್ಯೆಯ ಸೌಂದರ್ಯ ರಹಸ್ಯವೇನು?!

Subscribe to Filmibeat Kannada
Hema Malini's beauty secret
ಆಕೆ ತೀರಾ ಇತ್ತೀಚೆಗಷ್ಟೆ(ಅ.16) ಅರುವತ್ತನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಆದರೂ ಆಕೆ ಇಂದಿಗೂ ಸೌಂದರ್ಯದ ಖನಿ, ಕನಸಿನ ಕನ್ಯೆ! ಇಷ್ಟಕ್ಕೂ ಆಕೆಯ ಸೌಂದರ್ಯ ರಹಸ್ಯವೇನು? ಆಕೆಯ ಆಹಾರ ಕ್ರಮಗಳೇನು? ಎಂಬುದು ಬಹಳಷ್ಟು ಮಂದಿಯ ಸಂದೇಹ. ಇವಕ್ಕೆಲ್ಲಾ ಹೇಮ ಮಾಲಿನ ಕೊಟ್ಟ ಉತ್ತರಗಳು ಇಲ್ಲಿವೆ.

ಊಟ: ಚಿಕ್ಕಂದಿನಿಂದಲೂ ಅಷ್ಟೆ ಶಾಕಾಹಾರ.

ದಿನದ ಆರಂಭ: ಮುಂಜಾನೆ ಎದ್ದ ಕೂಡಲೆ ಗ್ರೀನ್ ಟೀ. ನಂತರ ಯೋಗ, ಪ್ರಾಣಾಯಾಮ.

ವ್ಯಾಯಾಮ: ತಪ್ಪದೆ ನಿಯಮಿತ ಮಾಡುತ್ತೇನೆ. ನನ್ನೊಂದಿಗೆ ಮಕ್ಕಳು ಮಾಡುತ್ತಾರೆ. ನೀರನ್ನು ಧಾರಾಳವಾಗಿ ಕುಡಿಯುತ್ತೇನೆ.

ಫಲಾಹಾರ: ಹಣ್ಣು, ಹಣ್ಣಿನ ರಸಗಳನ್ನು ಸೇವಿಸುತ್ತೇನೆ. ಭಾನುವಾರಗಳಂದು ಇಡ್ಲಿ, ಉಪ್ಪಿಟ್ಟು ಮಾತ್ರ.

ರಾತ್ರಿ ಊಟ: ರಾತ್ರಿ ಸಹ ಅಷ್ಟೆ ಮಧ್ಯಾಹ್ನದ ಮೆನು...ಒಂದು ವೇಳೆ ಸಂಜೆ ಅಲ್ಪಾಹಾರ ಸೇವಿಸಿದರೆ ರಾತ್ರಿ ಊಟ ಕ್ಯಾನ್ಸಲ್.

ಬಾಲ್ಯದಲ್ಲಿ:
ತಿಂಡಿ ಬಗ್ಗೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ನಾನು ಶಾಲೆಗೆ ಹೋಗುವ ದಿನಗಳಲ್ಲಿ ಅಮ್ಮ ಊಟದ ಡಬ್ಬಿಗೆ ಮೊಸರನ್ನ ಹಾಕಿ ಕೊಡುತ್ತಿದ್ದರು. ಅದನ್ನು ನಾನು ತಿನ್ನದೆ ನಾಯಿಗಳಿಗೆ ಹಾಕುತ್ತಿದ್ದೆ.

ಇಷ್ಟವಾದ ಊಟ: ಮಕ್ಕಳೊಂದಿಗೆ ಕುಳಿತು ಊಟ ಮಾಡುವುದು.

ಇಷ್ಟವಾದ ತರಕಾರಿಗಳು:
ಕುಂಬಳಕಾಯಿ, ಹಾಗಲಕಾಯಿ, ಸೊಪ್ಪು, ರಸ.

ಆರೋಗ್ಯ ರಹಸ್ಯ: ಉತ್ತಮ ಆಹಾರ, ಕನಿಷ್ಠ ದಿನಕ್ಕೆ ಅರ್ಧಗಂಟೆ ವ್ಯಾಯಾಮ, ಒತ್ತಡದಿಂದ ಆದಷ್ಟು ದೂರ ಇರಲು ಬಯಸುತ್ತೇನೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada