ಗಾಯಕಿ ಚಿತ್ರಾ ಮಗಳ ದುರಂತ ಸಂಭವಿಸಿದ್ದಾದರೂ ಹೇಗೆ?

By Rajendra

KS Chitra with daughter
ಜನಪ್ರಿಯ ಹಿನ್ನೆಲೆ ಗಾಯಕಿ ಕೆ ಎಸ್ ಚಿತ್ರಾ (47)ಮಗಳು ನಂದನಾ (8) ಈಜುಕೊಳಕ್ಕೆ ಬಿದ್ದು ದುರಂತ ಸಾವಪ್ಪಿದ್ದ ಘಟನೆ ನಿಜಕ್ಕೂ ಆಘಾತಕಾರಿ. ದುಬೈನಲ್ಲಿ ನಂದನಾ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಆಕೆಯ ಅಂತ್ಯಕ್ರಿಯೆಗಳು ಚೆನ್ನೈನಲ್ಲಿ ನೆರವೇರಲಿವೆ ಎಂದು ಚಿತ್ರಾ ಕುಟುಂಬ ಮೂಲಗಳು ತಿಳಿಸಿವೆ. ಆದರೆ ಈ ಸಾವು ಸಂಭವಿಸಿದ್ದಾರೂ ಹೇಗೆ?ಮನೆ ಆವರಣದಲ್ಲಿ ಈಜು ಕೊಳ ಇದೆ ಎಂದ ಮೇಲೆ ಮಕ್ಕಳ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕಾಗಿತ್ತಲ್ಲವೆ? ಹೀಗಿದ್ದೂ ಈ ದುರಂತ ಹೇಗೆ ಸಂಭವಿಸಿತು? ಎಂಬ ಪ್ರಶ್ನೆಗಳು ಮಕ್ಕಳಿರುವ ಪ್ರತಿಯೊಬ್ಬ ಪೋಷಕರನ್ನೂ ಕಾಡುತ್ತಿವೆ.

ಮಕ್ಕಳು ಎಂದ ಮೇಲೆ ಕೊಂಚ ಮೈಮರೆತರೂ ಏನೋ ಒಂದು ಆಪತ್ತು ತಂದುಕೊಂಡಿರುತ್ತವೆ. ಚಿತ್ರಾ ಅವರ ಚಿನ್ನುಮರಿಗೆ ಹಾಗಿದ್ದೂ ಹಾಗೆ. ನಂದನಾ ಹುಟ್ಟಿನಿಂದಲೇ ಡೌನ್ಸ್ ಸಿಂಡ್ರೋಮ್‌ನಿಂದ(ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳಿಸುವ ಕಾಯಿಲೆ) ಬಳಲುತ್ತಿದ್ದಳು. ಈ ಮಗುವನ್ನು ಚಿತ್ರಾ ದಂಪತಿಗಳು ಕಣ್ಣಿಗೆ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದರೂ. ಹಾಗಿದ್ದೂ ಈ ದುರಂತ ಸಂಭವಿಸಿಬಿಟ್ಟಿದೆ.

ಚಿತ್ರಾ ದಂಪತಿಗಳು ಎಲ್ಲಿಗೇ ಹೋಗಲಿ ತಮ್ಮಂದೊಂದಿಗೆ ನಂದನಾಳನ್ನೂ ಕರೆದೊಯ್ಯುತ್ತಿದ್ದರು. ಮುಖ್ಯವಾಗಿ ವಿದೇಶಗಳಿಗೆ ಹೋದರೂ ನಂದನಾರನ್ನು ಜೊತೆಗೇ ಕರೆದೊಯ್ಯುತ್ತಿದ್ದರು. ಗುರುವಾರ ಬೆಳಗ್ಗೆ ಹಾಡಿನ ರಿಹರ್ಸಲ್‌ಗೆಂದು ಸಿದ್ಧತೆಗಳನ್ನು ಮಾಡಿಕೊಂಡು ಇನ್ನೇನು ಹೊರಡಬೇಕು ಎಂದಿರುವಾಗ ನಂದನಾ ಕಾಣಿಸಲಿಲ್ಲ. ಕಂಗಾಲಾದ ಪೋಷಕರು ಮನೆಯ ಒಳಗೆ, ಹೊರಗೆಲ್ಲಾ ಹುಡುಕಿದರು. ಬಳಿಕ ನಂದನಾ ಮನೆಯ ಆವರಣದ ಈಜು ಕೊಳಕ್ಕೆ ಬಿದ್ದುರುವುದನ್ನು ಗಮನಿಸಿ ತಕ್ಷಣ ಆಕೆಯನ್ನು ನೀರಿನಿಂದ ಹೊರಗೆ ತಂದರಾದರೂ ಅಷ್ಟರಲ್ಲಾಗಲೆ ಪ್ರಾಣಪಕ್ಷಿ ಹಾರಿಹೋಗಿತ್ತು.

ಪುಟ್ಟಪರ್ತಿ ಸಾಯಿಬಾಬಾ ಭಕ್ತರಾದಚಿತ್ರಾ ಮತ್ತು ವಿಜಯಶಂಕರ್ ದಂಪತಿಗಳಿಗೆ 15 ವರ್ಷಗಳ ಬಳಿಕ ನಂದನಾ ಜನಿಸಿದ್ದರು. ಚೆನ್ನೈನಲ್ಲಿ ಹೊಸ ಮನೆಯನ್ನು ನಿರ್ಮಿಸುತ್ತಿರುವ ಚಿತ್ರಾ ದಂಪತಿಗಳು ಶೀಘ್ರದಲ್ಲೇ ಅಲ್ಲಿಗೆ ಹೋಗುವ ಆಲೋಚನೆಯಲ್ಲಿದ್ದರು. ಮಕ್ಕಳ ಬಗ್ಗೆ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಅಚಾನಕ್ಕಾಗಿ ಈ ರೀತಿಯ ಘಟನೆಗಳು ಸಂಭವಿಸಿಬಿಡುತ್ತವೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಆದಷ್ಟು ಜಾಗ್ರತ್ತೆ ವಹಿಸಲಿ ಎಂಬುದೇ ನಮ್ಮ ಉದ್ದೇಶ.

;

More from Filmibeat

English summary
Popular Indian playback singer K. S. Chithra eight-year-old daughter died after falling in a swimming pool at a Dubai villa on Thursday. Where it all went wrong for the baby and parents? According to family sources baby Nandana was suffering from Down Syndrome
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X