ಡೈಮಂಡ್ ಸ್ಟಾರ್ ಗೆ ಲಕ್ಕಿ ರಮ್ಯಾ ಬದಲಿಗೆ 'ಜಾಕಿ' ಭಾವನಾ

By Mahesh

ಸಂಜು ವೆಡ್ಸ್ ಗೀತಾ ಚಿತ್ರದ ಯಶಸ್ಸಿನ ನಂತರ ಡೈಮಂಡ್ ಸ್ಟಾರ್ ಶ್ರೀನಗರ ಜೊತೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಶುಭಮಂಗಳ ಚಿತ್ರ ರಿಮೇಕ್ ಆಗುತ್ತಿಲ್ಲ ಎಂದು ಲಕ್ಕಿ ಸ್ಟಾರ್ ರಮ್ಯಾ ಹೇಳಿದ್ದು ನಿಜವಾಗಿದೆ.

ಆದರೆ, ಪುಟ್ಟಣ್ಣ ಕಣಗಾಲ್ ಅವರ ದಶಕದ ಹಿಂದಿನ ಪ್ರಣಯ ರಾಜ ಶ್ರೀನಾಥ್ ಮತ್ತು ಆರತಿ ಮುಖ್ಯ ಭೂಮಿಕೆಯ ಹಿಟ್ ಚಿತ್ರ 'ಶುಭಮಂಗಳ" ಹೆಸರಿನ ಚಿತ್ರ ಸೆಟ್ಟೇರುತ್ತಿದೆ. ಇದು ಹಳೆ ಚಿತ್ರದ ರಿಮೇಕೋ, ರಿಮೀಕ್ಸೋ ಇನ್ನೂ ಸ್ಪಷ್ಟವಾಗಿಲ್ಲ, ಜೊತೆಗೆ ರಮ್ಯಾ ಬದಲಿಗೆ ಕಿಟ್ಟಿಗೆ ನಾಯಕಿಯಾಗಿ ಜಾಕಿ ಭಾವನಾ ಆಯ್ಕೆ ಯಾಗಿದ್ದಾರೆ.

ಚಿತ್ರಕ್ಕೆ ರಮ್ಯಾ ಬಳಿ ಕಾಲ್ ಶೀಟ್ ಕೇಳಲಾಗಿತ್ತು. ಆಕೆ ಕಾಲ್ ಶೀಟ್ ಸಿಗದೇ ಇದ್ದ ಕಾರಣ, ಗಲ್ಲಾಪೆಟ್ಟಿಗೆಯಲ್ಲಿ ಎಕ್ಕಾ ಮಕ್ಕಾ ಹಣ ಬಾಚಿಕೊಂಡ ಜಾಕಿ ಚಿತ್ರದ ನಾಯಕಿ ಭಾವನಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ನಿರ್ಮಾಪಕ ದಿನೇಶ್ ಗಾಂಧಿ.

ಭಾವನಾಗೆ ಒಳ್ಳೆ ಒಳ್ಳೆ ಆಫರ್ ಬರುತ್ತಿವೆಯಂತೆ. ಆದರೆ, ಕಥೆ ಮುಖ್ಯ. ಸ್ಕ್ರಿಪ್ಟ್ ಓದಿಯೇ ಚಿತ್ರಕ್ಕೆ ಸಹಿ ಹಾಕುತ್ತಿದ್ದೇನೆ, ಅವಕಾಶಗಳು ಸಿಗುತ್ತಿವೆ ಎಂದು ಎಲ್ಲಾ ಚಿತ್ರಕ್ಕೂ ಒಪ್ಪುತ್ತಿಲ್ಲ ಅನ್ನುತ್ತಾಳೆ ಮಲ್ಲು ಬೆಡಗಿ ಭಾವನಾ.

ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿಯಾದ ಪ್ರಜ್ವಲ್ ದೇವರಾಜ್ ಅಭಿನಯದ ಕೋಟೆ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರತಂಡಕ್ಕೊಂದು ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

More from Filmibeat

English summary
Jackie Bhavana Menon is back in Kannada. she has signed a movie opposite to Diamond Star Srinagara Kitty. Movie named Shubhamangala. Bhavana replaced Ramya according to sources.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X