ಉತ್ತರಾಂಚಲಕ್ಕೆ ಹ್ಯಾಟ್ರಿಕ್ ಹೀರೋ ಜೋಗಯ್ಯ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 100ನೇ ಚಿತ್ರ 'ಜೋಗಯ್ಯ' ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಮುಗಿದಿದೆ. ಮುಂದಿನ ಭಾಗದ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದ್ದು, ಬಳಿಕ ಉತ್ತರಾಂಚಲಕ್ಕೆ ಜೋಗಯ್ಯ ಪ್ರಯಾಣ ಬೆಳಸಲಿದ್ದಾನೆ.
ಈಗಾಗಲೆ ಚಿತ್ರದ ನಿರ್ದೇಶಕ ಪ್ರೇಮ್ ಅವರು ಹರಿದ್ವಾರ, ಋಷಿಕೇಶ ಮತ್ತು ವಾರಣಾಸಿ ಸುತ್ತಿ ಬಂದಿದ್ದಾರೆ. ಚಿತ್ರೀಕರಣಕ್ಕೆ ಅಲ್ಲಿ ಸೂಕ್ತ ತಾಣಗಳನ್ನು ಆಯ್ಕೆ ಮಾಡಿದ್ದಾರೆ. ಅಘೋರಿ ವೇಷದಲ್ಲಿರುವ ಶಿವಣ್ಣನ ಭಾಗದ ಚಿತ್ರೀಕರಣ ಉತ್ತರಾಂಚಲ ಅಥವಾ ವಾರಣಾಸಿಯಲ್ಲಿ ನಡೆಯುವ ಸಾಧ್ಯತೆ ಇದೆ.
ಮೈಸೂರಿನಲ್ಲಿ ನಡೆದ ಚಿತ್ರೀಕರಣ ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆದಿದೆ. ಚಿತ್ರದ ನಾಯಕಿ ಸುಮಿತ್ ಕೌರ್ ಮತ್ತು ಪೂಜಾಗಾಂಧಿ ಭಾಗದ ಚಿತ್ರೀಕರಣ ಮೈಸೂರಿನಲ್ಲಿ ಮುಗಿದಿದೆ. ಋಷಿಕೇಶ ಮತ್ತು ಹರಿದ್ವಾರದಲ್ಲಿ ಕುಂಭಮೇಳ ಮುಕ್ತಾಯವಾಗಿದೆ. ಈಗ ಅಲ್ಲಿ ಜನಜಾತ್ರೆ ಇಲ್ಲ. ಚಿತ್ರೀಕರಣಕ್ಕೆ ಅನುವಾಗಿದ್ದು, 'ಜೋಗಯ್ಯ' ಅತ್ತ ಪಾದ ಬೆಳಸಲಿದ್ದಾನೆ.
ಜೋಗಯ್ಯ ಶಿವರಾಜ್ ಕುಮಾರ್ ಮೈಸೂರು ಪ್ರೇಮ್ jogaiah shiva rajkumar mysore pooja gandhi rakshita prem v harikrishna


Click it and Unblock the Notifications