ಡಾ. ರಾಜ್ 'ಮರೆಯಲಾಗದ ಮುತ್ತುರಾಜ್' ಡಿವಿಡಿ

ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜ್ ಕುಮಾರ್ ಜೀವನಚರಿತ್ರೆ ಒಳಗೊಂಡಿರುವ ಈ ಡಿವಿಡಿಯಲ್ಲಿ ಅವರ ವೈಯಕ್ತಿಕ ಸಂದರ್ಶನಗಳು, ಸಿನಿಮಾ ಹಾಗೂ ಹುಟ್ಟೂರಿನ ಫೋಟೋಗಳು ಲಭ್ಯವಿದೆ. ಇಷ್ಟೇ ಅಲ್ಲದೇ, ಯುವಜನತೆಗೆ ಇದರಿಂದ ಸಾಕಷ್ಟು ಮಾಹಿತಿಯೂ ಲಭ್ಯವಾಗಲಿರುವುದು ಇದರ ಇನ್ನೊಂದು ವಿಶೇಷ.
ಈ ಡಿವಿಡಿ ಮೊದಲ ಪ್ರತಿಯನ್ನು ಬಿಡುಗಡೆಯನ್ನು 'ಡಾ ರಾಜ್ ಮಗ ಹಾಗೂ ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ನೆರವೇರಿಸಲಿದ್ದಾರೆ. ರಾಜ್ ಟೆಲಿವಷನ್ ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರನ್ ಇದನ್ನು ಸ್ವೀಕರಸಲಿದ್ದು, ಈ ಮೂಲಕ ಕನ್ನಡದ 'ಅಣ್ಣಾವ್ರು' ಡಾ. ರಾಜ್ ರಿಗೆ ಗೌರವ ಸಲ್ಲಿಸುವ ಮಹತ್ವದ ಸಮಾರಂಭವೊಂದು ನಡೆಯಲಿದೆ.
ಸ್ಯಾಂಡಲ್ ವುಡ್ ತಾರೆಗಳಾದ ರಾಗಿಣಿ ದ್ವಿವೇದಿ, ರಮ್ಯಾ ಬಾರ್ನಾ, ಹರ್ಷಿಕಾ ಪೂಣಚ್ಚ, ಸಿಂಧು ಮತ್ತು ಮೇಘನಾ ಗಾಂವ್ಕರ್ ಆಗಮಿಸಲಿದ್ದು ಗ್ಲಾಮರ್ ಹಾಗೂ ಹಬ್ಬದ ವಾತಾವರಣ ಅಲ್ಲಿ ಒಟ್ಟಿಗೆ ನಿರ್ಮಾಣವಾಗಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಕೋರಲಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Reliance TimeOut in association with Raj Video Vision Cordially invite you to the Launch of Dr. Rajkumar’s autobiography “Mareyalagada Muthuraj”- A Kannada DVD. It is on Wednesday, 16th November, 2011, at Reliance TimeOut, Cunningham Road, Bangalore.
ಡಾ ರಾಜ್ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಪಾರ್ವತಮ್ಮ ರಾಜ್ ಕುಮಾರ್ ಡಿವಿಡಿ dr raj shiva rajkumar puneeth rajkumar parvathamma rajkumar dvd


Click it and Unblock the Notifications











