twitter
    For Quick Alerts
    ALLOW NOTIFICATIONS  
    For Daily Alerts

    ಡಾ. ರಾಜ್ 'ಮರೆಯಲಾಗದ ಮುತ್ತುರಾಜ್' ಡಿವಿಡಿ

    |

    Dr. Rajkumar
    ರಾಜ್ ವಿಡಿಯೋ ವಿಸನ್ ಸಹಯೋಗದೊಂದಿಗೆ ರಿಲಯನ್ಸ್ ಟೈಮ್ ಔಟ್ ಹೊರತರುತ್ತಿದೆ ಡಾ ರಾಜ್ ಕುಮಾರ್ ಜೀವನಚರಿತ್ರೆ ಆಧರಿಸಿದ ಒಂದು ವಿಶಿಷ್ಠ ಕನ್ನಡ ಡಿವಿಡಿ, 'ಮರೆಯಲಾಗದ ಮುತ್ತುರಾಜ್'. ಈ ಡಿವಿಡಿ ಬಿಡುಗಡೆಯನ್ನು ನವೆಂಬರ್ 16, 2011ರ ಬುಧವಾರ ಸಂಜೆ 6 ಗಂಟೆಗೆ ಕನ್ನಿಂಗ್ ಹ್ಯಾಮ್ ರಸ್ತೆಯ 'ರಿಲಯನ್ಸ್ ಟೈಮ್ ಔಟ್' ನಲ್ಲಿ ಹಮ್ಮಿಕೊಳ್ಳಲಾಗಿದೆ.

    ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜ್ ಕುಮಾರ್ ಜೀವನಚರಿತ್ರೆ ಒಳಗೊಂಡಿರುವ ಈ ಡಿವಿಡಿಯಲ್ಲಿ ಅವರ ವೈಯಕ್ತಿಕ ಸಂದರ್ಶನಗಳು, ಸಿನಿಮಾ ಹಾಗೂ ಹುಟ್ಟೂರಿನ ಫೋಟೋಗಳು ಲಭ್ಯವಿದೆ. ಇಷ್ಟೇ ಅಲ್ಲದೇ, ಯುವಜನತೆಗೆ ಇದರಿಂದ ಸಾಕಷ್ಟು ಮಾಹಿತಿಯೂ ಲಭ್ಯವಾಗಲಿರುವುದು ಇದರ ಇನ್ನೊಂದು ವಿಶೇಷ.

    ಈ ಡಿವಿಡಿ ಮೊದಲ ಪ್ರತಿಯನ್ನು ಬಿಡುಗಡೆಯನ್ನು 'ಡಾ ರಾಜ್ ಮಗ ಹಾಗೂ ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ನೆರವೇರಿಸಲಿದ್ದಾರೆ. ರಾಜ್ ಟೆಲಿವಷನ್ ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರನ್ ಇದನ್ನು ಸ್ವೀಕರಸಲಿದ್ದು, ಈ ಮೂಲಕ ಕನ್ನಡದ 'ಅಣ್ಣಾವ್ರು' ಡಾ. ರಾಜ್ ರಿಗೆ ಗೌರವ ಸಲ್ಲಿಸುವ ಮಹತ್ವದ ಸಮಾರಂಭವೊಂದು ನಡೆಯಲಿದೆ.

    ಸ್ಯಾಂಡಲ್ ವುಡ್ ತಾರೆಗಳಾದ ರಾಗಿಣಿ ದ್ವಿವೇದಿ, ರಮ್ಯಾ ಬಾರ್ನಾ, ಹರ್ಷಿಕಾ ಪೂಣಚ್ಚ, ಸಿಂಧು ಮತ್ತು ಮೇಘನಾ ಗಾಂವ್ಕರ್ ಆಗಮಿಸಲಿದ್ದು ಗ್ಲಾಮರ್ ಹಾಗೂ ಹಬ್ಬದ ವಾತಾವರಣ ಅಲ್ಲಿ ಒಟ್ಟಿಗೆ ನಿರ್ಮಾಣವಾಗಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಕೋರಲಾಗಿದೆ. (ಒನ್ ಇಂಡಿಯಾ ಕನ್ನಡ)

    English summary
    Reliance TimeOut in association with Raj Video Vision Cordially invite you to the Launch of Dr. Rajkumar’s autobiography “Mareyalagada Muthuraj”- A Kannada DVD. It is on Wednesday, 16th November, 2011, at Reliance TimeOut, Cunningham Road, Bangalore.
 
    Tuesday, November 15, 2011, 17:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X