twitter
    For Quick Alerts
    ALLOW NOTIFICATIONS  
    For Daily Alerts

    2016ರ ಸಿನಿಮೋತ್ಸವದಲ್ಲಿ ಕನ್ನಡ ಮತ್ತು ತುಳು ಚಿತ್ರಗಳ ಅಬ್ಬರ

    By Suneetha
    |

    ಈ ಬಾರಿಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕರಾವಳಿ ಭಾಗದ ತುಳು ಸಿನಿಮಾವೊಂದು ಸೇರಿದಂತೆ ಒಟ್ಟು 15 ಕನ್ನಡ ಚಿತ್ರಗಳು ಸ್ಪರ್ಧೆಗೆ ಆಯ್ಕೆಯಾಗಿದ್ದು, ಕನ್ನಡ ಚಿತ್ರಗಳ ಸ್ಪರ್ಧೆಯ ವಿಜೇತರನ್ನು ಅಂತರರಾಷ್ಟ್ರೀಯ ಖ್ಯಾತಿಯ ತೀರ್ಪುಗಾರರು ನಿರ್ಧರಿಸಲಿದ್ದಾರೆ.

    ಅಂದಹಾಗೆ ಈ ಬಾರಿ ಚಲನಚಿತ್ರೋತ್ಸವ ಸ್ಪರ್ಧೆಗೆ ಬಂದಿದ್ದ 36 ಕನ್ನಡ ಚಿತ್ರಗಳಲ್ಲಿ 15 ಚಿತ್ರಗಳು ಅಂತಿಮವಾಗಿ ಸ್ಪರ್ಧೆಗೆ ಆಯ್ಕೆಯಾಗಿದ್ದು, ಅವುಗಳು ಈ ಕೆಳಗಿನಂತಿವೆ.[ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು]

    15 Kannada Films are selected for Bengaluru International Film Festival 2016

    ಸ್ಪರ್ಧೆಗೆ ಆಯ್ಕೆಯಾಗಿರುವ ಕನ್ನಡ ಚಿತ್ರಗಳೆಂದರೆ,
    • ವಿ.ಚಲ ಅವರ ನಿರ್ದೇಶನದ 'ಬಿರುಕು'
    • ಮೋಹನ್‌ಕುಮಾರ್ ಕೆ.ಎನ್. ನಿರ್ದೇಶನದ 'ಬೊಂಬೆಯಾಟ'
    • ವೀರೇಂದ್ರ ಶೆಟ್ಟಿ ಕಾವೂರ್ ಅವರ ತುಳು ಸಿನಿಮಾ 'ಚಾಲಿಪೋಲಿಲು'
    • ನಾಗನಾಥ ಮಾಧವ್ ರಾವ್ ಜೋಶಿಯ 'ಚಿಗುರು'
    • ಎಸ್. ನಾರಾಯಣ್ ಅವರ 'ದಕ್ಷ'
    • ಬಿ.ಸುರೇಶ್ ಅವರ 'ದೇವರ ನಾಡಲ್ಲಿ'.[8ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಿತಿ ರಚನೆ]
    • ಬಿ.ಎಮ್.ಗಿರಿರಾಜ್ ಅವರ 'ಮೈತ್ರಿ'
    • ಬಿ.ಎಸ್.ಲಿಂಗದೇವರು ಅವರ 'ನಾನು ಅವನಲ್ಲ ಅವಳು'
    • ವೆಂಕಟ್ ಭಾರಧ್ವಾಜ್ ಅವರ 'ನಗರದಲ್ಲಿ ಒಂದು ದಿನ'
    • ದಿನೇಶ್‌ಬಾಬು ಅವರ 'ಪ್ರಿಯಾಂಕ'
    • ಸುನಿಲ್ ರಾಘವೇಂದ್ರ ಅವರ 'ಪುಟ ತಿರುಗಿಸಿ ನೋಡು'
    • ಅನುಪ್ ಭಂಡಾರಿ ಅವರ 'ರಂಗಿತರಂಗ'
    • ಉಮಾಶಂಕರ್ ಸ್ವಾಮಿ ಅವರ 'ಸಾಲದ ಮಗು'
    • ಹಾಗು ಪಿ. ಶೇಷಾದ್ರಿ ನಿರ್ದೇಶನದ 'ವಿದಾಯ'.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

    ಇದೇ ಮೊದಲ ಬಾರಿಗೆ ತುಳು ಸಿನಿಮಾ ಒಂದು ಸೇರಿದಂತೆ ಕನ್ನಡ ಸಿನಿಮಾಗಳು ಈ ಬಾರಿಯ ಸಿನಿಮೋತ್ಸವದಲ್ಲಿ ಅಬ್ಬರಿಸಲಿದ್ದು, ಕನ್ನಡಿಗರ ಮತ್ತು ತುಳುವರ ಕಂಪನ್ನು ಈ ಉತ್ಸವ ಎಲ್ಲೆಡೆ ಪಸರಿಸಲಿದೆ.

    English summary
    15 Kannada Films are selected for Bengaluru International Film Festival 2016, which will be held in Bangalore and Mysuru from January 28 to February 4. 61 countries are taking part and 170 movies from all languages will be showcased in this film festival.
    Thursday, January 7, 2016, 18:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X