'ಅಖಾಡ'ಕ್ಕಿಳಿದ ಸಾಫ್ಟ್‌ವೇರ್ ಉದ್ಯಮಿ ಮಗ ವಸಂತ್

ಈ ಹಿಂದೆ ಇವರು ಭವ್ಯಾ ಮುಖ್ಯಭೂಮಿಕೆಯಲ್ಲಿದ್ದ 'ಆಕರ್ಷಣೆ' ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಆದರೆ ಆ ಚಿತ್ರ ಬಿಡುಗಡೆ ಕಾಣದೆ ಡಬ್ಬದ ಸಮೇತ ಮಾಯವಾಗಿತ್ತು. 'ಅಖಾಡ' ಚಿತ್ರದ ಕತೆ ತಮಗೆ ಸಿಕ್ಕಾಪಟ್ಟೆ ಇಷ್ಟವಾದ ಕಾರಣ ತಾವೇ ಚಿತ್ರವನ್ನು ನಿರ್ಮಿಸಿದ್ದಾಗಿ ಅವರು ತಿಳಿಸಿದ್ದಾರೆ.
ಈ ಚಿತ್ರದ ನಾಯಕ ನಟ ಬೇರಾರು ಅಲ್ಲ ನಿರ್ಮಾಪಕರ ಮಗ ವಸಂತ್. ಈ ಚಿತ್ರಕ್ಕಾಗಿ ಮೂರು ತಿಂಗಳ ಅಭಿನಯ ತರಬೇತಿಯನ್ನೂ ವಸಂತ್ ಚೆನ್ನೈನಲ್ಲಿ ಪಡೆದಿದ್ದಾರಂತೆ. 'ರಂಭಾ' ಎಂಬ ಚಿತ್ರದಲ್ಲಿ ಮಾದಕ ನಾಯಕಿಯಾಗಿ ನಟಿಸಿದ ನಂತರ ಸಣ್ಣಪುಟ್ಟ ಪಾತ್ರಗಳು ಹಾಗೂ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದ ನಯನಾ ಕೃಷ್ಣ ಈ ಚಿತ್ರದ ಮೂಲಕ ಮತ್ತೆ ನಾಯಕಿಯಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)
English summary
Kannada movie Akhada is ready for release. Recently The audio of the film ‘Akhada’ was released by Sri Yogishwara Rishikumara Swamiji at GM Rejoyz. New comer Vashanth is the hero of the film.


Click it and Unblock the Notifications