»   » ಜೈಪುರದಲ್ಲಿ ಜೋಶ್ಹಾಡಿಗೆ ಕುಣಿದ ಹುಡುಗರು

ಜೈಪುರದಲ್ಲಿ ಜೋಶ್ಹಾಡಿಗೆ ಕುಣಿದ ಹುಡುಗರು

Subscribe to Filmibeat Kannada

ವಿನೂತನ ಪ್ರಚಾರದ ಹರಿಕಾರರಾಗಿರುವ ಎಸ್.ವಿ.ಬಾಬು ನಿರ್ಮಾಣದ ಜೋಶ್ ಚಿತ್ರೀಕರಣ ಪೂರ್ವದಿಂದಲೂ ಹಲವು ವಿಶೇಷಗಳನ್ನೊಳಗೊಂಡ ಚಿತ್ರ. ಕಲಾವಿದರ ತವರೂರಾದ ಕರುನಾಡಿನ ಪ್ರತಿಭಾವಂತರನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಿದಲ್ಲದೆ ಆರಿಸಿ ಬಂದವರನ್ನು ಚಿತ್ರದ ವಿವಿಧ ಭಾಗದಲ್ಲಿ ತೊಡಗಿಸಿಕೊಂಡಿದ್ದಾರೆ. ನಿಗದಿತ ಯೋಜನೆಯಂತೆ ಚಿತ್ರೀಕರಣ ನಡೆಸುತ್ತಾ ಬಂದಿರುವ ನಿರ್ದೇಶಕರು ಪ್ರಸ್ತುತ ಹಾಡೊಂದರ ಚಿತ್ರೀಕರಣಕ್ಕಾಗಿ ಅರಮನೆಗಳ ನಗರ ಜೈಪುರಕ್ಕೆ ತೆರಳಿದ್ದಾರೆ.

ಅಲ್ಲಿ ಕವಿರಾಜ್ ಬರೆದಿರುವ 'ತನನ್‌ತಾನೆ ತಂತಾನೆ - ಸೆಳೆಯುತ್ತಾಳೆ ನನ್ನನೆ ....ತಂತಾನೆ ಬೇಕೆನುತ್ತಾನೆ ಮರೆಸುತ್ತಾಳೆ ಮೈಯನೆ' ಗೀತೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ನಿತ್ಯಾ ಭಾಗವಹಿಸಿದ ಈ ಗೀತೆಗೆ ನೊಬಲ್ ನೃತ್ಯ ಸಂಯೋಜಿಸಿದ್ದಾರೆ. ಎಸ್.ವಿ.ಬಾಬು ಅವರ ಪುತ್ರ ಎಸ್.ಸಂಜಯ್‌ಬಾಬು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಿವಮಣಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಸಂತೋಷ ರೈ ಪತಾಜೆ ಛಾಯಾಗ್ರಹಣ, ವರ್ಧನ್ ಸಂಗೀತ, ಬಿ.ಎ.ಮಧು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ನಾಗೇಂದ್ರಪ್ರಸಾದ್, ಕವಿರಾಜ್, ಹೃದಯಶಿವ ಹಾಗೂ ಆನಂದ್ ಗೀತರಚನೆ, ರವಿವರ್ಮ, ಜಾಲಿಬಾಸ್ಟಿನ್ ಸಾಹಸ, ಸ್ಟಾನ್ಲಿ ಡಿ ಕೋಸ್ಟಾ, ನೋಬಲ್, ಬೃಂದಾ ನೃತ್ಯ, ಮೈಸೂರ್ ಕೃಷ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣುಪ್ರಸನ್ನ, ಅಕ್ಷಯ್, ಅಲೋಕ್, ಅಮಿತ್, ಜಗನ್ನಾಥ್, ಪೂರ್ಣ, ಸ್ನೇಹ, ಚೇತನ್, ಕರಿಬಸವಯ್ಯ, ರೋಮಗಣೇಶ್, ಮಂಡ್ಯರಮೇಶ್, ತುಳಸಿಶಿವಮಣಿ, ಸುಧಾಬೆಳವಾಡಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ದ್ವಿತೀಯ ಹಂತದ ಚಿತ್ರೀಕರಣದಲ್ಲಿ 'ಜೋಶ್'

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada