For Quick Alerts
  ALLOW NOTIFICATIONS  
  For Daily Alerts

  ಶಿಷ್ಯ ದೀಪಕ್ ಚಿತ್ರ ಮಾಗಡಿ ಬಿಡುಗಡೆಗೆ ಸಿದ್ಧ

  |

  ಉಲ್ಲಾಸ್ ಕ್ರಿಯೇಷನ್ಸ್ ಅವರ ಮಾಗಡಿ ಚಿತ್ರ ನಾಳೆ (ಮಾರ್ಚ್ 16, 2012) ರಾಜ್ಯಾದ್ಯಂತ ತೆರೆಕಾಣಲಿದೆ. ಭಾ ಮ ಹರೀಶ್ ಹಾಗೂ ಬಿ ಎಂ ದಿವಾಕರ್ ಗೌಡ ನಿರ್ಮಾಣ ಹಾಗೂ ಕೆ ಸುರೇಶ್ ಗೋಸ್ವಾಮಿ ನಿರ್ದೇಶನ ಮಾಗಡಿ ಚಿತ್ರಕ್ಕಿದೆ. ಈ ಚಿತ್ರ 60 ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  ಭಾ ಮ ಹರೀಶ್ ಸಂಬಂಧಿ ಹಾಗೂ ಶಿಷ್ಯ ಖ್ಯಾತಿಯ ದೀಪಕ್ ಈ ಚಿತ್ರದ ನಾಯಕ. ನಾಯಕಿಯಾಗಿ ರಕ್ಷಿತಾ ನಟಿಸಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ, ಎಸ್ ರಮೇಶ್ ಛಾಯಾಗ್ರಹಣ ಮಾಗಡಿ ಚಿತ್ರಕ್ಕಿದೆ. ಎನ್ ಎಂ ವಿಶ್ವ ಸಂಕಲನಕಾರರು. ಎಂ ಎನ್ ಕೆ ಮೂವೀಸ್ ಈ ಚಿತ್ರದ ಹಂಚಿಕೆ ಹಕ್ಕು ಪಡೆದಿದೆ.

  ನಾಳೆ ಬಿಡುಗಡೆಯಾಗಲಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಕಾರಣ ತಿಂಗಳ ಹಿಂದೆ ನಡೆದಿದ್ದ ಆಡಿಯೋ ಬಿಡುಗಡೆಗೆ ಜನಸಾಗರವೇ ನೆರೆದಿತ್ತು. ನಿರ್ಮಾಪಕರಿಬ್ಬರೂ ಆಗಿನಿಂದಲೇ ತಮ್ಮ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಪ್ರಚಾರ ಕಾರ್ಯವೂ ಸಾಕಷ್ಟು ಬಿರುಸಿನಿಂದಲೇ ನಡೆಯುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada Movie Magadi Releases Tomorrow, on 15 March 2012. This movie produced under Ullas Creations Banner and K Suresh Goswamy Directed this.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X