ಮತ್ತೆ ತೆರೆಯಲ್ಲಿ ನೋಡಿ 'ಮತ್ತೆ ಬನ್ನಿ ಪ್ರೀತ್ಸೋಣ'
ರೆಬೆಲ್ ಸ್ಟಾರ್ ಅಂಬರೀಷ್ ಪ್ರೋತ್ಸಾಹದೊಂದಿಗೆ ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರ ಮತ್ತೆ ಬಿಡುಗಡೆ ಆಗುತ್ತಿದೆ. ಕಳೆದ ಜೂನ್ ನಲ್ಲಿ ಒಮ್ಮೆ ತೆರೆಗೆ ಬಂದು ವಾಪಸ್ ಆಗಿದ್ದ ಚಿತ್ರ ' ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ. ಈಗ 'ಸಾರಿ' ಪದವನ್ನು ಪಕ್ಕಕ್ಕಿಟ್ಟು ತೆರೆಯ ಮೇಲೆ ಮತ್ತೆ ಮ್ಯಾಜಿಕ್ ಮಾಡಲಿದೆ, ಮತ್ತೆ ಬನ್ನಿ ಪ್ರೀತ್ಸೋಣ. ಜತೆಗೆ 'ಪ್ರೇಕ್ಷಕರಿಂದ ಪ್ರೇಕ್ಷಕರಿಗೋಸ್ಕರ' ಎಂಬ ಜಾಹೀರಾತಿನೊಂದಿಗೆ.
ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಈ ಚಿತ್ರವನ್ನು ವಿನಯ್ ನರ್ಕರ್ ನಿರ್ಮಿಸಿದ್ದಾರೆ. ರವೀಂದ್ರ ಎಚ್ ಪಿ ದಾಸ್ ಹಾಗೂ ನಿರ್ದೇಶನ ಮಾಡಿದ್ದಾರೆ. ಇದನ್ನು ತಂಡದ ಪ್ರಯತ್ನ ಎನ್ನುವ ಮೂಲಕ ವಿಭಿನ್ನತೆಯನ್ನೂ ಮೆರೆದಿದ್ದಾರೆ, ರವೀಂದ್ರ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರೂ ಗಾಂಧಿನಗರದ ಪಾಲಿಟೆಕ್ಸ್ ಗೆ ಬೇಸತ್ತು ರವೀಂದ್ರ ಚಿತ್ರದ ಪ್ರದರ್ಶನವನ್ನು ಮೂರೇ ದಿನಕ್ಕೆ ರದ್ದು ಪಡಿಸಿದ್ದರು.
ಇದೀಗ ಬೆಂಗಳೂರು ಭೂಮಿಕ ಹಾಗೂ ರಾಜ್ಯಾದ್ಯಂತ ನಾಳೆ, ಡಿಸೆಂಬರ್ 16, 2011 ರಿಂದ ಮತ್ತೆ ತೆರೆಗೆ ಬರಲಿದೆ. ಚಿತ್ರವನ್ನು ನೋಡಿದ ಅಂಬರೀಷ್ ಹಾಗೂ ರವೀಂದ್ರ ಮಿತ್ರರು ಅದನ್ನು ಮತ್ತೆ ತೆರೆಗೆ ತರುತ್ತಿದ್ದಾರೆ. ಲೀಲಾ ಶಂಕರ್ ಹಾಗೂ ನಾನಾಗೌಡ ಎಂಬವರು ಚಿತ್ರವನ್ನು ಮತ್ತೆ ಪ್ರದರ್ಶಿಸುತ್ತಿರುವ ರವೀಂದ್ರ ಮಿತ್ರರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











