»   » ರಿಲಯನ್ಸ್ ಮನರಂಜನಾ ಸಂಸ್ಥೆಗೆ ಕಾಸರವಳ್ಳಿ ಚಿತ್ರ

ರಿಲಯನ್ಸ್ ಮನರಂಜನಾ ಸಂಸ್ಥೆಗೆ ಕಾಸರವಳ್ಳಿ ಚಿತ್ರ

Subscribe to Filmibeat Kannada
Girish Kasaravalli
ರಿಲಯನ್ಸ್ ಎಂಟರ್ ಟೈನ್ ಮೆಂಟ್ ನ ಮುಂದಿನ ಕನ್ನಡ ಚಿತ್ರವನ್ನು ಖ್ಯಾತ ನಿರ್ದೆಶಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಲಿದ್ದಾರೆ. ಅಮರೇಶ ನುಗದೋಣಿ ಅವರ ಕಾದಂಬರಿ 'ಸವಾರಿ'ಯನ್ನು ಕಾಸರವಳ್ಳಿ ಈ ಬಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಅವರು ಯಶವಂತ ಚಿತ್ತಾಲರ 'ಸಿದ್ಧಾರ್ಥ' ಕಾದಂಬರಿಯನ್ನು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ಕಾದಂಬರಿ ಚಿತ್ರವಾಗುವುದು ಚಿತ್ತಾಲರಿಗೆ ಇಷ್ಟವಿರಲಿಲ್ಲ, ಒಪ್ಪಿಗೆ ನೀಡಲು ನಿರಾಕರಿಸಿದರು. ಆ ಕಾರಣಕ್ಕೆ ಕಾಸರವಳ್ಳಿ 'ಸಿದ್ಧಾರ್ಥ'ನನ್ನು ಕೈಬಿಟ್ಟಿದ್ದರು.

ನಂತರ ಹಲವಾರು ಕಾದಂಬರಿಗಳ ಹುಡುಕಾಟದಲ್ಲಿ ಕಾಸರವಳ್ಳಿ ನಿರತರಾಗಿ ಕಡೆಗೆ 'ಸವಾರಿ'ಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾದಂಬರಿ ಹೆಸರನ್ನೆ ಚಿತ್ರಕ್ಕೂ ಇಡಬೇಕು ಎಂದು ಕಾಸವಳ್ಳಿ ನಿರ್ಧರಿಸಿದರು. ಪೀಕಲಾಟ ಶುರುವಾಗಿದ್ದೆ ಇಲ್ಲಿ. 'ಸವಾರಿ' ಶೀರ್ಷಿಕೆಯನ್ನು ಅದಾಗಲೆ ರಿಜಿಸ್ಟರ್ ಮಾಡಿಕೊಳ್ಳಲಾಗಿತ್ತು. ಶ್ರೀನಗರ ಕಿಟ್ಟಿ ನಟಿಸುತ್ತಿರುವ ರೀಮೇಕ್ ಚಿತ್ರಕ್ಕೆ ಆ ಹೆಸರು ನೋಂದಣಿಯಾಗಿದೆ. ತೆಲುಗಿನ 'ಗಮ್ಯಂ' ಚಿತ್ರವನ್ನು ನಿರ್ಮಾಪಕ ರಾಮೋಜಿ ರಾವ್ ಕನ್ನಡಕ್ಕೆ ತರುತ್ತಿದ್ದಾರೆ.

ಸರಿ ವಿಧಿ ಇಲ್ಲದೆ ಕಾಸರವಳ್ಳಿ ಮತ್ತೊಂದು ಶೀರ್ಷಿಕೆಯ ಹುಡುಕಾಟದಲ್ಲಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ವೈಜಯಂತಿ ಬಿರಾದಾರ ಮುಖ್ಯ ಭೂಮಿಕೆಯಲ್ಲಿದ್ದು, ಉಮಾಶ್ರೀ, ಪವಿತ್ರಾ ಲೋಕೇಶ್ ನಟನೆಯೂ ಇದೆ. ಡಿ.20 ರಂದು ಚಿತ್ರ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada