ಕೋಟಿಗೊಬ್ಬ-2 ಚಿತ್ರಕ್ಕಾಗಿ ಸುದೀಪ್ ಸಿಕ್ಸ್ ಪ್ಯಾಕ್

<ul id="pagination-digg"><li class="next"><a href="/news/15-sudeep-vishnuvardhan-kotigobba-sequel-movie-aid0172.html">Next »</a></li></ul>

ನಟ ಕಿಚ್ಚ ಸುದೀಪ್ ಸಿಕ್ಸ್ ಪ್ಯಾಕ್ ಮಾಡಲು ಹೊರಟಿದ್ದಾರೆ. ಕೋಟಿಗೊಬ್ಬ-2 ಚಿತ್ರ ಸಿದ್ಧವಾಗುತ್ತಿದ್ದು ಅದರಲ್ಲಿ ನಟಿಸುತ್ತಿರುವ ಸುದೀಪ್ ಆ ಚಿತ್ರಕ್ಕಾಗಿ ತಮ್ಮ ದೇಹವನ್ನು ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲಿದ್ದಾರೆ. ಅದು ಸಾಹಸಸಿಂಹ, ದಿವಂಗತ ನಟ ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರದ ಮುಂದುವರಿದ ಭಾಗ, ಕೋಟಿಗೊಬ್ಬ-2 ಚಿತ್ರ. ನಿರ್ಮಾಪಕರು ಅದೇ ಸೂರಪ್ಪ ಬಾಬು.

ದುನಿಯಾ ವಿಜಯ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಲವ್ಲಿ ಸ್ಟಾರ್ ಪ್ರೇಮ್ ಸಾಲಿಗೀಗ ಸುದೀಪ್ ಕೂಡ ಸೇರುತ್ತಿದ್ದಾರೆ. ಅದಕ್ಕಾಗಿ ತಯಾರಿ ಆರಂಭಿಸಿರುವ ಕಿಚ್ಚ, ಲಕ್ಷಗಟ್ಟಲೆ ಖರ್ಚು ಮಾಡಿ ಜಿಮ್ ಯಂತ್ರಗಳನ್ನು ತರಿಸಿಕೊಂಡಿದ್ದಾರೆ. ಪ್ರತಿದಿನ ಬೆವರು ಸುರಿಸುತ್ತಿದ್ದಾರೆ. ಮುಂದಿನ ವರ್ಷದ ಆರಂಭದ ಹೊತ್ತಿಗೆ ಸುದೀಪ್ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಲಿದ್ದಾರೆ.

ವಿಷ್ಣುವರ್ಧನ್ ಕೋಟಿಗೊಬ್ಬ ಚಿತ್ರ ತಮಿಳಿನ 'ಬಾಷಾ' ರಿಮೇಕ್. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ ಆ ಚಿತ್ರದ ನಿರ್ದೇಶಕ ಸುರೇಶ್ ಕೃಷ್ಣ. ಅದೇ ಚಿತ್ರವನ್ನು ಕನ್ನಡದಲ್ಲಿ ನಾಗಣ್ಣ ನಿರ್ದೇಶಿಸಿದ್ದರು. ಈಗ ಎರಡನೇ ಭಾಗವನ್ನು ಯಾರು ನಿರ್ದೇಶಿಸುವುದು ಅನ್ನೋದು ಪಕ್ಕಾ ಆಗಿಲ್ಲವಾದರೂ, ಸುರೇಶ್ ಕೃಷ್ಣ ಅವರೇ ನಿರ್ದೇಶಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮುಂದಿನ ಪುಟದಲ್ಲಿ....

<ul id="pagination-digg"><li class="next"><a href="/news/15-sudeep-vishnuvardhan-kotigobba-sequel-movie-aid0172.html">Next »</a></li></ul>

More from Filmibeat

English summary
Actor Kichcha Sudeep acts with Six Pack Abs in his coming movie Kotigobba-2. It is the Sequel of actor Dr Vishnuvardhan's released movie Kotogobba. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X