ಮೈಸೂರಲ್ಲಿ ಕಿರಾತಕ ಎತ್ತಂಗಡಿ; ಪ್ರದೀಪ್ ಪ್ರತಿಭಟನೆ

By Rajendra

ಶೀರ್ಷಿಕೆಯಿಂದಲೆ ಹೆಂಗೆಳೆಯರನ್ನು ಸೆಳೆಯುತ್ತಿರುವ ಚಿತ್ರ 'ಕೃಷ್ಣನ್ ಮ್ಯಾರೇಜ್ ಸ್ಟೋರಿ'. ಈ ಚಿತ್ರ ಶುಕ್ರವಾರ (ಜು.15) ರಾಜ್ಯದಾದ್ಯಂತ ತೆರೆಕಂಡಿದೆ. ಹಾಗೆಯೇ ಮೈಸೂರು ಸರಸ್ವತಿಪುರಂನ ಸರಸ್ವತಿ ಚಿತ್ರಮಂದಿರದಲ್ಲೂ ಬಿಡುಗಡೆಯಾಗಿದೆ. ಇದೇ ಚಿತ್ರಮಂದಿರಲ್ಲಿ ಪ್ರದರ್ಶನ ಕಾಣುತ್ತಿದ್ದ 'ಕಿರಾತಕ' ಚಿತ್ರ ಎತ್ತಂಗಡಿಯಾಗಿದೆ.

ಈ ಸಂಬಂಧ 'ಕಿರಾತಕ' ಚಿತ್ರ ನಿರ್ದೇಶಕ ಪ್ರದೀಪ್ ಸರಸ್ವತಿ ಚಿತ್ರಮಂದಿರದ ಇಂದು ಮುಂದೆ ಪ್ರತಿಭಟಿಸಿದರು. ತಮ್ಮ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೂ ಎತ್ತಂಗಡಿ ಮಾಡಲಾಗಿದೆ. ತಮ್ಮ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

'ಕಿರಾತಕ' ಚಿತ್ರ ತಕ್ಕಮಟ್ಟಿಗೆ ಪ್ರಶಂಸೆ ಪಡೆದಿತ್ತು. ಚಿತ್ರದ ಪ್ರಮುಖ ಪಾತ್ರದಲ್ಲಿ ಯಶ್, ಓವಿಯಾ ಅಭಿನಯಿಸಿದ್ದರು. ಪ್ರದೀಪ್ ನಿರ್ದೇಶನದ ಈ ಚಿತ್ರ ತಮಿಳು ಚಿತ್ರವೊಂದರ ಮರುಸೃಷ್ಟಿ.ನೂತನ್ ಉಮೇಶ್ ಆಕ್ಷನ್ ಕಟ್ ಹೇಳಿರುವ 'ಕೃಷ್ಣನ್ ಮ್ಯಾರೇಜ್ ಸ್ಟೋರಿ'ಯಲ್ಲಿ ಅಜಯ್ ರಾವ್ ಹಾಗೂ ನಿಧಿ ಸುಬ್ಬಯ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Director Pradeep's Kirataka movie has been replaced by Krishnan Marriage Story on Friday (July 15th) in Mysore where it is running in Saraswathi theater. The director had claimed that his movie was being taken out in just few weeks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X