ಡಿಂಪಲ್ ಕನ್ನಡ ಟಾಕ್ ಮಾಡ್ತಾರೆ ಕೇಳಿ!

By * ಚಿತ್ರಗುಪ್ತ

ಕನ್ನಡಕ್ಕೆ ಪರಭಾಷಾ ನಟಿಯರು ಲಗ್ಗೆಯಿಡುತ್ತಿರುವುದು ಇತ್ತೀಚೆಗೆ ಮಾಮೂಲಿ. ಪೂಜಾ ಗಾಂಧಿ, ನಿಖಿತಾ, ನಮಿತಾ ಇತ್ಯಾದಿ ಹುಡುಗಿಯರು ಕನ್ನಡಕ್ಕೆ ಬಂದು ಒಂದಷ್ಟು ಸದ್ದು ಮಾಡಿದರು.

ಆದರೆ, ಕನ್ನಡ ಕಲಿಯುವ ಯತ್ನಕ್ಕೆ ಹೆಚ್ಚಿನವರು ಹೋಗಲೇ ಇಲ್ಲ. ಪೂಜಾ ಗಾಂಧಿ ಕನ್ನಡವನ್ನು ಕಂಗ್ಲಿಷ್ ಭಾಷೆಯಲ್ಲಿ ಆಡುವುದನ್ನು ನೋಡುತ್ತಿದ್ದರೆ, ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ. ಆದರೂ, ನಮ್ಮ ಕನ್ನಡ ನಟಿಯರ ಕನ್ನಡಕ್ಕಿಂತ ಎಷ್ಟೋ ವಾಸಿ.

ಅದೇ ರೀತಿ, ಮೊನ್ನೆ ಮೊನ್ನೆಯಷ್ಟೇ ಬಂದಿರುವ ಡಿಂಪಲ್ ಚೋಪಡಾ ಎಂಬ 'ಕೋಟೆ' ಚಿತ್ರದ ನಾಯಕಿ ಕಷ್ಟಪಟ್ಟು ಕಲಿತಿರುವ ಕನ್ನಡ ಮಾತಾಡುವ ಪರಿಯೇ ಒಂಥರಾ ಮಜಾ! "ನಾನು ಕನಡ ಟಾಕ್ ಮಾಡ್ತೀನಿ. ನಿಮ್ಗೆ ಅದ್ರ ಮೀನಿಂಗ್ ಗೊತ್ತಾಗುತ್ತೆ ಅಂದ್ಕೊಳ್ಳಿ. ನನ್ ಲಾಂಗ್ವೇಜ್ ಹಿಂದಿ ಆದ್ರೂ ದಿಸ್ ರೀಜನಲ್ ಭಾಷೆ ತುಂಬಾನೇ ಚನಾಗಿದ. ಸೋ ನೈಸ್ ಆಫ್ ಕನ್ನಡ. ನೀವ್ ನನ್ ಕನಡ ಕೇಳಿ ಬೇಜಾರ್ ಮಾಡ್ಕತಾ ಇರಿ. ನಂಗೇನೂ ಬೆಜಾರಲ್ಲ." ಕುಯ್ಯೋ ಕುರ್ರೋ... ಮೊನ್ನೆಯ ದಿನ ಪ್ರೆಸ್ ಮೀಟ್‌ನಲ್ಲಿ ಅವರನ್ನು ಕನ್ನಡದಲ್ಲಿ ಕೆದಕಿದಾಗ ಹೊರಬಿದ್ದ ಡಿಂಡಿಮ ಹೀಗಿತ್ತು.

ಏಕೆ ಹೀಗೆ ಎಂದು ಕೇಳಿದರೆ, "ನನ್ನ ಮೂಲ ಹೆಸ್ರು ಪೂಜಾ ಇದೆ. ಅದ್ನ ನ್ಯೂಮರಾಲಜಿಗೆ ಸೆಟ್ ಮಾಡ್ಕೊಂಡು ಡಿಂಪಲ್ ಅಂತ ಮಾಡ್ಕೊಂಡೇ ಕಣೋ..." ಎಂದು ವ್ಯಾಕರಣಕ್ಕೆ ಗೋಲಿ ಹೊಡೆಯುತ್ತಾರೆ ಡಿಂಪಲ್!

ಹಾಗಾದರೆ ಇದು ಅವರ ಮೂಲ ಹೆಸರಿನಲ್ಲಿರುವ (ಪೂಜಾ) ಪವಾಡ ಇರಬಹುದೇ?! ಅಂದಹಾಗೇ ಡಿಂಪಲ್ ನಟಿಸಿರುವ 'ಸಿಹಿ ಮುತ್ತು' ಚಿತ್ರ ಇನ್ನೂ ರಿಲೀಸ್ ಆಗಿಲ್ಲ. ಅದೇ ಅವರ ಮೊದಲ ಕನ್ನಡ ಚಿತ್ರ. ಕೋಟೆ ಚಿತ್ರದಲ್ಲಂತೂ ಡಿಂಪಲ್ ಸಾಕಷ್ಟು ಬಿಸಿಬಿಸಿಯಾಗಿಯೇ ಕಾಣಿಸಿಕೊಂಡಿದ್ದಾರೆ.

More from Filmibeat

English summary
Many actresses who have come from other regional film industry have tried to learn Kannada. Though it is not amazing, but amusing to listen to their Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X