'ಗಂಡೆದೆ'ಯಲ್ಲಿ ಮಾರಾಮಾರಿ ಹೊಡೆದಾಟ
ರಾಮು ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ 'ಗಂಡೆದೆ'ಗಾಗಿ ಈಗ ನಗರದ ಸುತ್ತಮುತ್ತ ಭರದ ಚಿತ್ರೀಕರಣ ಸಾಗಿದೆ. ಚಿತ್ರಕ್ಕಾಗಿ ನಂದಿನಿ (ರಾಗಿಣಿ) ಮೇಲಿನ ಪ್ರೀತಿಗಾಗಿ ಕೃಷ್ಣ (ಚಿರಂಜೀವಿ ಸರ್ಜಾ) ಕಾಲೇಜಿನಲ್ಲಿ ಗೂಂಡಾಗಿರಿಗೆ ಹೆಸರಾಗಿದ್ದ ಉದಯ್ ಬೈಕನ್ನು ಒರೆಸುವುದು ಹಾಗೂ ನಂದಿನಿ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಕೃಷ್ಣ ಹಾಗೂ ಉದಯ್ ನಡುವೆ ಮಾರಾಮಾರಿ ಹೊಡೆದಾಟ ನಡೆಯುತ್ತದೆ.
ಇದೇ ರೀತಿಯ ಹಲವಾರು ಸನ್ನಿವೇಶಗಳನ್ನು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನದೊಂದಿಗೆ ಮುಜೀರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಅಕುಲ್ ಶಿವ ಚಿತ್ರಿಸಿಕೊಂಡರು.ಚಿತ್ರದ ಚಿತ್ರೀಕರಣವು ಒಂದೇ ಹಂತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.
ಚಿತ್ರಕ್ಕೆ ರಾಮ್‌ನಾರಾಯಣ್ ಸಂಭಾಷಣೆ, ಸಾಹಿತ್ಯ, ಚಕ್ರಿ ಸಂಗೀತ, ಮುಜೀರ್ ಛಾಯಾಗ್ರಹಣ, ಮುನಿರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಇಸ್ಮಾಯಿಲ್ ಕಲೆ, ಉಮೇಶ್ ನಿರ್ಮಾಣ ನಿರ್ವಹಣೆ ಇದ್ದು, ಚಿತ್ರವನ್ನು ಅಕುಲ್‌ಶಿವ ನಿರ್ದೇಶಿಸುತ್ತಿದ್ದಾರೆ.ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ರಾಗಿಣಿ, ದೇವರಾಜ್, ರಮೇಶ್ ಭಟ್ ,ರಂಗಾಯಣರಘು, ಸಾಧುಕೋಕಿಲ, ಅರುಣಾ ಬಾಲ್‌ರಾಜ್, ಚಿತ್ರಾ ಶೆಣೈ, ಲಕ್ಷ್ಮಣ್, ಪವನ್, ಸಂಕೇತ್ ಕಾಶಿ ಮುಂತಾದವರಿದ್ದಾರೆ.


Click it and Unblock the Notifications











