»   » ಮಸ್ತ್ ಮಜಾ ಆಯ್ತು, ಮುಂದೆ ಮಸ್ತ್ ಮಕ್ಕಳ ಚಿತ್ರ

ಮಸ್ತ್ ಮಜಾ ಆಯ್ತು, ಮುಂದೆ ಮಸ್ತ್ ಮಕ್ಕಳ ಚಿತ್ರ

Subscribe to Filmibeat Kannada
Soundarya Jagadish with his son
'ಮಸ್ತ್ ಮಜಾ ಮಾಡಿ' ಚಿತ್ರದ ನಿರ್ಮಾಪಕ ಸೌಂದರ್ಯ ಜಗದೀಶ್ ಸಖತ್ ಖುಷಿಯಾಗಿದ್ದಾರೆ. ಕಾರಣ, ಚಿತ್ರಕ್ಕೆ ಮಸ್ತ್ ಓಪನಿಂಗ್ ಸಿಕ್ಕಿದೆ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಸೌಂದರ್ಯ ಜಗದೀಶ್ ಮಕ್ಕಳ ಚಿತ್ರ ಮಾಡಲು ಮುಂದಾಗಿದ್ದಾರೆ.

ಮಕ್ಕಳ ಚಿತ್ರ ಮಾಡಿ ಪ್ರಶಸ್ತಿ ಪಡೆಯಬೇಕು ಎಂಬುದು ಅವರ ಬಹುದಿನಗಳ ಆಸೆ. ಆ ಆಸೆ ಈಗ ಮರುಜೀವ ಪಡೆದುಕೊಂಡಿದೆ. ಇದಕ್ಕೆಲ್ಲ ಕಾರಣ ಅವರ ಪುತ್ರ ಸ್ನೇಹಿತ್ ಜಗದೀಶ್. 'ಮಸ್ತ್ ಮಜಾ...' ಚಿತ್ರದ ಒಂದು ಹಾಡಿನಲ್ಲಿ ಉಪೇಂದ್ರ ಹನ್ನೆರಡು ಜನ ನಾಯಕಿಯರು ಕುಣಿದಿದ್ದರು. ಆ ಹಾಡಿನ ಕೊನೆಗೆ ಮಾಸ್ಟರ್ ಸ್ನೇಹಿತ್ ಸಹ ಹೆಜ್ಜೆಹಾಕಿದ್ದ.ಅದು ಪ್ರೇಕ್ಷಕರಿಗೆ ಇಷ್ಟವಾಯಿತೊ ಇಲ್ಲವೊ ಗೊತ್ತಿಲ್ಲ. ಆದರೆ ಸೌಂದರ್ಯ ಜಗದೀಶ್ ಗೆ ಮಾತ್ರ ಸಖತ್ ಇಷ್ಟವಾಗಿದೆ.

ತಮ್ಮ ಪುತ್ರನನ್ನು ತೆರೆಗೆ ತರಲು ಇದೇ ಸೂಕ್ತ ಕಾಲ ಎಂದು ಭಾವಿಸಿರುವ ಅವರು ಮಕ್ಕಳ ಚಿತ್ರ ಮಾಡಲು ನಿರ್ಧರಿಸಿದ್ದಾರೆ. ಹಾಗಾಗಿ ಮುಂದಿನ ವರ್ಷ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ. ಹಾಗೆಯೇ ಮಸ್ತ್ ಮಜಾ ಮಾಡಿ ಚಿತ್ರದ ನಾಯಕರಲ್ಲೊಬ್ಬರಾದ ದಿಗಂತ್ ಜೊತೆಗೆ ಮುಂದಿನ ವರ್ಷ ಒಂದು ಚಿತ್ರ ನಿರ್ಮಿಸುವ ಯೋಜನೆಯೂ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ
ನಕ್ಕು ನಲಿಸಿ ಸುಸ್ತಾಗಿಸುತ್ತೆ ಮಸ್ತ್ ಮಜಾ ಮಾಡಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada