ಭಾವುಕ ಕ್ಷಣಗಳಲ್ಲಿ ಮಿಂದೆದ್ದ ಮಾಯದಂಥ ಮಳೆ

By Rajendra

ಕಷ್ಟಪಟ್ಟು ಸಾಕಿಸಲುಹಿದ ಮಕ್ಕಳು ತಂದೆತಾಯಿ ಮುಂದೆ ಸತ್ತು ಹೋದರೆ ಹೆತ್ತವರಿಗೆ ಅದಕ್ಕಿಂತ ದುಖಃ ಬೇರೊಂದಿಲ್ಲ. 'ಮಾಯದಂಥ ಮಳೆ' ಚಿತ್ರದಲ್ಲೂ ಇಂತಹ ಪ್ರಸಂಗವೊಂದು ಜರಗುತ್ತದೆ. ಮಗಳನ್ನು ಕಳೆದುಕೊಂಡ ತಂದೆಯೊಬ್ಬ ದುಖಃ ತಾಳಲಾಗದೆ ಆತ್ಮಾಹುತಿಗೆ ಶರಣಾಗಲು ಮುಂದಾಗುತ್ತಾನೆ.

ಇದನ್ನು ಗಮನಿಸಿದ ನೆರೆಮನೆಯ ಯುವತಿಯೊಬ್ಬಳು ಅಲ್ಲಿಗೆ ಆಗಮಿಸಿ ಕೆಲವು ಧೈರ್ಯ ತುಂಬುವ ಮಾತುಗಳನಾಡಿ ಆತನನ್ನು ಸಾವಿನ ದವಡೆಯಿಂದ ಪಾರು ಮಾಡುತ್ತಾಳೆ. ಸುಂಕದಕಟ್ಟೆಯ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಣಗೊಂಡ ಈ ಸನ್ನಿವೇಶದಲ್ಲಿ ಹಿರಿಯ ನಟ ಶರತ್‌ಬಾಬು ಹಾಗೂ ದಿವ್ಯ ಅಭಿನಯಿಸಿದ್ದರು.

ಈ ಹಂತದ ಚಿತ್ರೀಕರಣದಲ್ಲಿ ಶರತ್‌ಬಾಬು ಹಾಗೂ ಶ್ರುತಿ ಅವರ ಅಭಿನಯಿಸಿದ ಕೆಲವು ದೃಶ್ಯಗಳನ್ನೂ ನಿರ್ದೇಶಕ ವೀರೇಶ್‌ದೊಡ್ಡಬಳ್ಳಾಪುರ ಧರ್ಮಗಿರಿ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಚಿತ್ರಿಸಿಕೊಂಡರು.ಗಂಗಾಪರಮೇಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ಕೆರೆಮಲ್ಲು ಬದ್ರಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಎ.ಸಿ.ಮಹೇಂದರ್ ಛಾಯಾಗ್ರಹಣ, ಮ್ಯೂಜಿಕ್‌ಮೋಹನ್ ಸಂಗೀತ, ಕೆಂಪರಾಜ್ ಅವರ ಸಂಕಲವಿರುವ ಚಿತ್ರಕ್ಕೆ ರವಿಚೇತನ್, ಭಾವನಾರಾವ್, ಅಜಿತ್, ದಿವ್ಯ, ಶರತ್‌ಬಾಬು, ಶ್ರುತಿ, ಪ್ರಕಾಶ್‌ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ರೇಖಾಕುಮಾರ್, ಹೊನ್ನವಳಿ ಕೃಷ್ಣ, ಸುಂದರಶ್ರೀ, ಋತು, ಮಿಮಿಕ್ರಿ ರಾಜಗೋಪಾಲ್ ಮುಂತಾದವರ ತಾರಾಬಳಗವಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X