ಯೋಗರಾಜ್ ಭಟ್ ಶಿಷ್ಯನ ನಿಮ್ಹಾನ್ಸ್ ಸ್ಟೋರಿ

ನಿಮ್ಹಾನ್ಸ್ ಎಂಬ ಚಿತ್ರದ ಹೆಸರು ಗಾಂಧಿನಗರದಲ್ಲಿ ವಿಚಿತ್ರ ಕುತೂಹಲ ಮೂಡಿಸಿದೆ. ನಿರ್ಮಾಪಕರು ತಮ್ಮ ಮೊದಲ ನಿರ್ಮಾಣದಲ್ಲೇ ನಿಮ್ಹಾನ್ಸ್ ಸೇರದಿದ್ದರೆ ಸಾಕು ಎಂದು ಆಡಿಕೊಂಡವರು ಇದ್ದಾರೆ. ಆದರೆ, ಚಿತ್ರತಂಡ ಮಾತ್ರ ಆತ್ಮವಿಶ್ವಾಸದಿಂದ "ನಿಮ್ಹಾನ್ಸ್" ಹೆಸರನ್ನು ಸಮರ್ಥಿಸಿಕೊಂಡಿದೆ. ಇದು ಹುಚ್ಚರ ಕಥೆಯಲ್ಲ. ನಿಮ್ಹಾನ್ಸ್ ಆಸ್ಪತ್ರೆ ಸುತ್ತ ಗಿರಕಿ ಹೊಡೆಯುವ ಚಿತ್ರವೂ ಅಲ್ಲ. ಕಥೆ ನಿಮ್ಹಾನ್ಸ್ ಆಸ್ಪತ್ರೆಯಿಂದಲೇ ಶುರುವಾಗುವುದರಿಂದ ಈ ಟೈಟಲ್ ಇಡಲಾಗಿದೆ ಎಂದು ನಿರ್ದೇಶಕ ರಮೇಶ್ ಹೇಳುತ್ತಾರೆ.
ಬೆಂಗಳೂರು, ಮಂಡ್ಯ ಜಿಲ್ಲೆಯ ಭರಚುಕ್ಕಿ ಜಲಪಾತ ಬಳಿ ಚಿತ್ರೀಕರಣ ನಡೆದಿದೆ. ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್, ಶಶಾಂಕ್ ಅವರ ಮಾರ್ಗದರ್ಶನದಲ್ಲಿ ಹೆಚ್ ಕೆ ರಮೇಶ್ ಈ ಚಿತ್ರಕ್ಕೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಜೊತೆಗೆ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಸೂರ್ಯ, ನರೋನ್ಹಾ, ವಿದ್ಯಾ, ನಾಗಿಣಿ ಭರಣಿ, ರಮೇಶ್ ಭಟ್, ಅರುಣಾ ಬಾಲರಾಜ್, ರಾಜಕುಮಾರ್, ಮೈಕೋ ಶಿವಾಜಿ, ಹರೀಶ್, ಮಮತಾರಾವ್ ತಾರಾಬಳಗ ಚಿತ್ರಕ್ಕಿದೆ. ಸುರೇಶ್ ಬಾಬು ಅವರ ಛಾಯಾಗ್ರಹಣ , ಅವಿನಾಶ್ ಸಂಗೀತ ಚಿತ್ರಕ್ಕಿದೆ. (ಏಜೆನ್ಸೀಸ್)


Click it and Unblock the Notifications











