»   » ಕನ್ನಡಕ್ಕೆ ಬರಲಿದ್ದಾರೆ ಬಾಲಿವುಡ್‌ನ ಅತಿಥಿಗಳು

ಕನ್ನಡಕ್ಕೆ ಬರಲಿದ್ದಾರೆ ಬಾಲಿವುಡ್‌ನ ಅತಿಥಿಗಳು

Subscribe to Filmibeat Kannada

ಬಾಲಿವುಡ್‌ ನಟರಾದ ನಾನಾ ಪಾಟೇಕರ್ ಅಥವಾ ಸುನಿಲ್ ಶೆಟ್ಟಿ ಇವರಿಬ್ಬರಲ್ಲಿ ಒಬ್ಬರು ಕನ್ನಡದ 'ನೀನೇ ಎಲ್ಲಾ' ಚಿತ್ರದಲ್ಲಿ ನಟಿಸಲಿದ್ದಾರೆ. ಐದು ನಿಮಿಷಗಳ ಕಾಲಾವಧಿಯ ಅತಿಥಿ ಪಾತ್ರದ ಕಾಣಿಸಲಿದ್ದಾರೆ. ಚಿತ್ರದಲ್ಲಿನ ಡಿಶುಂ ಡಿಶುಂ, ಹಾಡು ಅಥವಾ ಯಾವುದಾದರೂ ಒಂದು ಸನ್ನಿವೇಶದಲ್ಲಿ ಹಾಗೆ ಬಂದು ಹೀಗೆ ಹೋಗಲಿದ್ದಾರೆ.

'ನೀನೇ ಎಲ್ಲಾ' ಚಿತ್ರದ ನಿರ್ದೇಶಕ ಸಚಿನ್ ಬಾಲಿವುಡ್‌ನಲ್ಲಿ ಲಾರೆನ್ಸ್ ಡಿಸೋಜಾ, ವಿಕ್ರಂ ಭಟ್, ಬಿ.ಆರ್.ಇಷಾರಾ, ದಿನೇಶ್ ದುಬೆ ಹಾಗೂ ಮಹಮದ್ ಆಲಿ ಸೇರಿದಂತೆ ಮುಂತಾದವರ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಹಾಗಾಗಿ ಬಾಲಿವುಡ್‌ನ ಖ್ಯಾತ ನಾಮರನ್ನು ಕನ್ನಡಕ್ಕೆ ಕರೆತರುವ ಇರಾದೆ ಸಹಜವಾಗಿ ಸಚಿನ್‌ ಅವರಿಗಿದೆ. ಬಾಲಾಜಿ ಟಿವಿ ತಂಡದಲ್ಲಿ ಮೂರು ವರ್ಷಗಳ ಕಾಲ ಚಿತ್ರಕಥೆಗಳ ಮೇಲ್ವಿಚಾರಕರಾಗಿ ಕೆಲಸ ಮಾಡಿದ ಅನುಭವ ಇದೆ.

ಅನಿವಾಸಿ ಕನ್ನಡಿಗರಾದ ಜಾಯ್ ಮತ್ತು ರೋಹನ್ ಪ್ರದೀಪ್ 'ನೀನೆ ಎಲ್ಲಾ' ಚಿತ್ರಕ್ಕೆ ನಿರ್ಮಾಣದ ಜವಾಬ್ದಾರಿಯನ್ನು ಎಲ್ಲಾ ಅವರೇ ಹೊತ್ತಿದ್ದಾರೆ. ತಮ್ಮ ಗೆಳೆಯನೊಬ್ಬನ ನಿಜ ಜೀವನದ ಕಥೆಯನ್ನು ಆಧರಿಸಿ ನಿರ್ದೇಶಕ ಸಚಿನ್ ಚಿತ್ರಕಥೆ ರೂಪಿಸಿದ್ದರಂತೆ. ನೀನೇ ಎಲ್ಲಾ ಸಚಿನ್ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ. ಹಾಗೆಯೇ ಚಿತ್ರದ ಮುಖ್ಯ ಭೂಮಿಕೆಯಲ್ಲಿನ ಭರತ್ ಮತ್ತು ಅಮೃತಾ ಅವರಿಗೂ ಇದು ಮೊದಲ ಚಿತ್ರ.

ನೀಲಾ ಅವರ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಗುರುಪ್ರಸಾದ್ ಛಾಯಾಗ್ರಹಣವಿದೆ. ರವೀಂದ್ರ ಹಾಗೂ ತಬಲಾ ನಾಣಿ ಸಂಭಾಷಣೆ ಇದೆ. ಚಿತ್ರೀಕರಣ ಜುಲೈ 15ರಿಂದ ಪ್ರಾರಂಭವಾಗಲಿದೆ. ಚಿತ್ರದ ಧ್ವನಿ ಸುರುಳಿ ಹಾಗೂ ಸಿಡಿಗಳು ಅಕ್ಟೋಬರ್ 20 ರಂದು ಬಿಡುಗಡೆ ಕಾಣಲಿವೆ. ನವಂಬರ್ 13 ರಂದು ಯುಕೆಯಲ್ಲಿ ವಿಶೇಷ ಪ್ರದರ್ಶನ ಕಂಡು ನವೆಂಬರ್ 21ರಂದು ಎಲ್ಲಾ ಕಡೆ ಚಿತ್ರ ಬಿಡುಗಡೆಯಾಗಲಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada