ಆಂಧ್ರದಲ್ಲಿ 'ನೀಲಕಂಠ' ನಿರ್ಮಾಪಕ ಬಾಲಮುತ್ತಯ್ಯ ಬಂಧನ
ನಮ್ಮಣ್ಣ, ನೀಲಕಂಠ, ರಾಮಕೃಷ್ಣ ಚಿತ್ರಗಳ ನಿರ್ಮಾಪಕ ಬಾಲಮುತ್ತಯ್ಯ ಅವರನ್ನು ಜೆ ಪಿ ನಗರ ಪೊಲೀಸರು ಹೈದರಾಬಾದ್‌ನಲ್ಲಿ ಬುಧವಾರ (ಜೂ.15) ಬಂಧಿಸಿದ್ದಾರೆ. ಧರ್ಮರಾಯನ ಗುಡಿ ಕಾರ್ಪೊರೇಟರ್ ಧನರಾಜ್‌ಗೆ ನೀಡಿದ್ದ ರು.55 ಲಕ್ಷದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಅವರು ಜೆ ಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಕಾರ್ಪೊರೇಟರ್ ಧನರಾಜ್ ಅವರು ಬಾಲಮುತ್ತಯ್ಯ ಅವರಿಗೆ ರು.55 ಲಕ್ಷ ಸಾಲ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಾಲಮುತ್ತಯ್ಯ ಅಷ್ಟೇ ಮೊತ್ತದ ಚೆಕ್ ನೀಡಿದ್ದರು. ಈ ಚೆಕ್ ಬ್ಯಾಂಕ್ ಖಾತೆಗೆ ಹಾಕಿದಾಗ ಬೌನ್ಸ್ ಆಗಿದೆ. ತಮ್ಮ ಸಾಲ ತೀರಿಸುವಂತೆ ಹಲವಾರು ಬಾರಿ ವಿನಂತಿಸಿಕೊಂಡರೂ ಬಾಲಮುತ್ತಯ್ಯನಿಂದ ಸೂಕ್ತ ಪ್ರತಿಕ್ರಿಯೆ ಬರದೆ ಇದ್ದ ಕಾರಣ ಕಡೆಗೆ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಕಳೆದ ಕೆಲವು ತಿಂಗಳಿಂದ ತಲೆಮರೆಸಿಕೊಂಡಿದ್ದ ಬಾಲಮುತ್ತಯ್ಯನನ್ನು ಹೈದರಾಬಾದ್‌ನಲ್ಲಿ ಬಂಧಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆಪ್ತಮಿತ್ರ ಹಾಗೂ ಮುತ್ತಯ್ಯ ಚಿತ್ರಗಳ ವಿತರಕರರೂ ಆಗಿದ್ದರು ಬಾಲಮುತ್ತಯ್ಯ. ವಿಚಾರಣೆಗಾಗಿ ಅವರನ್ನು ಇಂದು 20ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











