»   » ಪವರ್ ಸ್ಟಾರ್ ಪುನೀತ್ ಸಿಕ್ಸ್ ಪ್ಯಾಕ್ ಗುರು ಯಾರು?

ಪವರ್ ಸ್ಟಾರ್ ಪುನೀತ್ ಸಿಕ್ಸ್ ಪ್ಯಾಕ್ ಗುರು ಯಾರು?

Posted By:
Subscribe to Filmibeat Kannada
<ul id="pagination-digg"><li class="next"><a href="/news/15-puneeth-rajkumar-six-pack-trainer-shubhakara-shetty-aid0172.html">Next »</a></li></ul>
Puneet Rajkumar
ಭರದಿಂದ ಚಿತ್ರೀಕರಣ ನಡೆಯುತ್ತಿರುವ ಚಿತ್ರ ಅಣ್ಣಾಬಾಂಡ್. ಬಿಡುಗಡೆಗೂ ಮೊದಲೇ ಪರಮಾತ್ಮ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ ಈ ಅಣ್ಣಾಬಾಂಡ್ ಶೂಟಿಂಗ್ ವೇಳೆಯಲ್ಲಿಯೇ ಭರ್ಜರಿ ಮಿಂಚಿಂಗ್! ಕಾರಣ, ಇದು ಯಶಸ್ವೀ ಚಿತ್ರ 'ಜಾಕಿ' ಜೋಡಿ ಪವರ್ ಸ್ಟಾರ್ ಪುನೀತ್ ಮತ್ತು ಸೂರಿ ಕಾಂಬಿನೇಷನ್ ಎಂಬುದು ಒಂದಾದರೆ ಪುನೀತ್ ಸಿಕ್ಸ್ ಪ್ಯಾಕ್ ಬಾಡಿ ಮೋಡಿ ಇನ್ನೊಂದು.

ಈ ಸಿಕ್ಸ್ ಪ್ಯಾಕ್, ಪುನೀತ್ ಪಡೆಯಲು ಯಾರು ಕಾರಣ? ಅದೂ ಅಷ್ಟು ಬೇಗ! ಅವರನ್ನು ಟ್ರೇಂಡ್ ಮಾಡಿದ್ದು ಯಾರು? ಎಂಬಿತ್ಯಾದಿ ಎಲ್ಲರ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಅವರು 'ಶುಭಕರ ಶೆಟ್ಟಿ' ಎಂಬ ಉಡುಪಿ ಮೂಡುಅಲೆವೂರಿನ ವ್ಯಕ್ತಿ. ಮಹಾರಾಷ್ಟ್ರದ ಮಹತ್ವದ ಅನೇಕ ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಂಡಿರುವ ಬಾಲಕೃಷ್ಣ ಶೆಟ್ಟಿ ಹಾಗೂ ಸುಲೋಚನಾ ಶೆಟ್ಟಿ ದಂಪತಿಯ ಕಿರಿಯ ಮಗ.

ಅಣ್ಣಾಬಾಂಡ್ ಅಪರೂಪದ ದೇಹಸಿರಿಗೆ ಪುನೀತ್ ಗೆ ತರಬೇತುದಾರರಾಗಿ ಶುಭಕರ ಶೆಟ್ಟಿಗೆ ಆಹ್ವಾನ ಬಂದಾಗ ಅವರು ಅದನ್ನು ಸಂತೋಷದಿಂದ ಸ್ವೀಕರಿಸಿ ತರಬೇತಿ ನೀಡಿದ್ದಾರೆ. ಈಗಿರುವ ಪುನೀತ್ ಸಿಕ್ಸ್ ಪ್ಯಾಕ್ ಬೊಂಬಾಟ್ ಬಾಡಿ ಅವರ ಟ್ರೈನಿಂಗ್ ಸಾಕ್ಷಿಯಾಗಿ ಎಲ್ಲರೆದುರಿಗೆ ಇದೆ. ಅದನ್ನು ನೋಡಿದರೆ ಶುಭಕರ ಶೆಟ್ಟಿಗೆ ಶುಭಕಾಲ ಬಂದಿದೆ ಎಂದೇ ಹೇಳಬೇಕು. ಶುಭಕರ ಶೆಟ್ಟಿಯ ಬಯೊಡಾಟಾ ಮುಂದಿನ ಪುಟದಲ್ಲಿದೆ ನೋಡಿ...

<ul id="pagination-digg"><li class="next"><a href="/news/15-puneeth-rajkumar-six-pack-trainer-shubhakara-shetty-aid0172.html">Next »</a></li></ul>
English summary
In upcoming movie Annabond, Power star Puneeth Rajkumar acts with Six pack body. His trainer details are here to read. &#13; &#13; &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada