»   » ಕನ್ನಡಕ್ಕೆ ಸಾಲ್ಟ್ ಅಂಡ್ ಪೆಪ್ಪರ್ ತರಲಿದ್ದಾರೆ ಪ್ರಕಾಶ್ ರೈ

ಕನ್ನಡಕ್ಕೆ ಸಾಲ್ಟ್ ಅಂಡ್ ಪೆಪ್ಪರ್ ತರಲಿದ್ದಾರೆ ಪ್ರಕಾಶ್ ರೈ

Posted By:
Subscribe to Filmibeat Kannada

ಬಾಲಿವುಡ್‌ನ 'ಸಿಂಗಂ' ಚಿತ್ರದಲ್ಲಿ ಕನ್ನಡಿಗರನ್ನು ನಾಯಿಗಳು ಎಂದು ಜರಿಯಲಾಗಿತ್ತು. ಈ ಚಿತ್ರದಲ್ಲಿ ಪ್ರಕಾಶ್ ರೈ ಅಭಿನಯಿಸಿದ್ದಾರೆ ಎಂಬ ಕಾರಣಕ್ಕೆ ಆ ಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಪ್ರಕಾಶ್ ರೈ ತೆಲುಗು, ತಮಿಳು ಚಿತ್ರರಂಗದಲಿ ಬಿಜಿಯಾದರು. ಸದಾಶಿವ ಶೆಣೈ ಅವರ 'ಪ್ರಾರ್ಥನೆ' ಚಿತ್ರದಲ್ಲೂ ಪ್ರಕಾಶ್ ರೈ ಅಭಿನಯಿಸಿದ್ದು, ಈ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ.

ಈಗ ಮತ್ತೊಂದು ಚಿತ್ರವನ್ನು ಪ್ರಕಾಶ್ ರೈ ಕೈಗೆತ್ತಿಕೊಂಡಿದ್ದಾರೆ. ಮಲಯಾಳಂನ ಸೂಪರ್ ಹಿಟ್ ಚಿತ್ರ 'ಸಾಲ್ಟ್ ಅಂಡ್ ಪೆಪ್ಪರ್‌'ರನ್ನು ಮೂರು ಭಾಷೆಗಳಿಗೆ ರೀಮೇಕ್ ಮಾಡಲಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಿಗೆ 'ಸಾಲ್ಟ್ ಅಂಡ್ ಪೆಪ್ಪರ'ನ್ನು ಪ್ರಕಾಶ್ ರೈ ತರುತ್ತಿದ್ದಾರೆ.

ವಿಶೇಷ ಎಂದರೆ ಈ ಮೂರು ಭಾಷೆಯ ಚಿತ್ರಗಳ ನಿರ್ದೇಶನದ ಜವಾಬ್ದಾರಿಯನ್ನು ಪ್ರಕಾಶ್ ರೈ ಹೊತ್ತಿದ್ದಾರೆ. ಸದ್ಯಕ್ಕೆ ಕೇರಳದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಕಾಶ್ ರೈ ಭಾಗವಹಿಸಿದ್ದಾರೆ. ಈಗ ನಿರ್ದೇಶಿಸಲಿರುವ ಚಿತ್ರದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. (ಎಜೆನ್ಸೀಸ್)

English summary
National award winning Kannada actor-director-producer Prakashraj has bagged the rights of super hit Malayalam film Salt N Pepper to be remade in three South Indian languages Kannada, Tamil and Telugu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada