»   » ಅಂತಾರಾಷ್ಟ್ರೀಯ ಸೆಕ್ಸ್ ದಂಧೆಯಲ್ಲಿ ಸಿನಿ ತಾರೆ ಅರೆಸ್ಟ್

ಅಂತಾರಾಷ್ಟ್ರೀಯ ಸೆಕ್ಸ್ ದಂಧೆಯಲ್ಲಿ ಸಿನಿ ತಾರೆ ಅರೆಸ್ಟ್

Posted By:
Subscribe to Filmibeat Kannada
ಪೊಲೀಸರು ಅಂತಾರಾಷ್ಟ್ರೀಯ ಸೆಕ್ಸ್ ರ್‍ಯಾಕೆಟ್ ಪತ್ತೆ ಹಚ್ಚಿದ್ದು ಉಜ್ಬೇಕಿಸ್ತಾನ ಮೂಲದ ಯುವತಿ ಹಾಗೂ ಹಲವಾರು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ 22ರ ಪ್ರಾಯದ ನಟಿ ಕಮ್ ರೂಪದರ್ಶಿಯನ್ನು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಕಾರ್ಯಾಚರಣೆಯಲ್ಲಿ ಈ 'ರಾತ್ರಿ ದಂಧೆ' ಬಯಲಾಗಿದೆ.

ಮುಂಬೈನ ಸಾಂತಾಕ್ರೂಸ್ ಬಳಿಯಿರುವ ಪಂಚತಾರಾ ಹೋಟೆಲ್ ಹೊರಗಡೆ ಮೂವರು ಪಿಂಪ್‌ಗಳನ್ನು ಬಂಧಿಸಿದ ನಂತರ ಸೆಕ್ಸ್ ರಾಕೆಟ್ ಬಯಲಾಗಿದೆ. ಈ ದಂಧೆಯಲ್ಲಿ ಭಾರತೀಯ ಚಿತ್ರರಂಗದ ನಟಿಯರು ಹಾಗೂ ವಿದೇಶಿ ಮೂಲದ ಯುವತಿಯರು ರಾಕೆಟ್ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದರಿಂದ ದಾಳಿ ಸುಲಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಬಳಿ ವಿದೇಶಿ ಹಾಗೂ ಭಾರತೀಯ ಚಿತ್ರರಂಗದ ನಟಿಯರಿದ್ದಾರೆ. ಒಂದು ರಾತ್ರಿಗೆ ವಿದೇಶಿ ಯುವತಿಗೆ 50,000ದಿಂದ 60,000 ರುಪಾಯಿಗಳು. ಭಾರತೀಯ ಚಿತ್ರರಂಗದ ನಟಿಗಾದರೆ ರು.40,000 ಎಂದು ಏಜೆಂಟರು ರೇಟ್ ಫಿಕ್ಸ್ ಮಾಡಿದ್ದರು.

ಗ್ರಾಹಕರ ಸೋಗಿನಲ್ಲಿ ತೆರಳಿದ್ದ ಪೊಲೀಸರು ಲಾಲ್ ಗೀತಾ, ನನ್ನು ಮಂಡಲ್, ಗಣೇಶ್ ನಿರೋಮಂಡಲ್ ಹಾಗೂ ಶಮ್ಸಾದ್ ಖಾನ್ ಎನ್ನುವ ಏಜಂಟರನ್ನು ಬಂಧಿಸಿದ್ದಾರೆ. ಇವರೆಲ್ಲಾ ಮುಂಬೈನ ಪ್ರತಿಷ್ಠಿತ ಪಂಚತಾರಾ ಹೋಟೆಲ್ ಗ್ರ್ಯಾಂಡ್ ಹಯಾತ್‌ನಲ್ಲಿ ತಮ್ಮ ದಂಧೆ ನಡೆಸುತ್ತಿದ್ದರು. ಬಂಧಿತ ತಾರೆಯ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. (ಏಜೆನ್ಸೀಸ್)

English summary
Mumbai city police today claimed to have busted an international prostitution racket with the arrest of three persons and rescued a young woman from Uzbekistan and a small-time Telugu actress-cum-model here today.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X