ತಪ್ಪದೆ ವೀಕ್ಷಿಸಿ 'ಕೋಟ್ಯಾಧಿಪತಿ' ಪುನೀತ್ ಹುಟ್ಟುಹಬ್ಬ
'ಕನ್ನಡದ ಕೋಟ್ಯಾಧಿಪತಿ' ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಇಂದು (ಮಾ.15) ನಡೆಯಲಿದೆ. ಅಯ್ಯೋ ಶಿವನೇ ಇದೇನಪ್ಪಾ ಇದು ಎಂದು ಬೇಸ್ತು ಬೀಳಬೇಡಿ. ಅವರ ಅಸಲಿ ಹುಟ್ಟುಹಬ್ಬ ಇರುವುದು ಮಾರ್ಚ್ 17ಕ್ಕೆ. ಆದರೆ ಅವರು ಆ ದಿನ ಕರ್ನಾಟದಲ್ಲಿರುವುದಿಲ್ಲ. 'ಅಣ್ಣಾ ಬಾಂಡ್' ಹಾಡಿನ ಚಿತ್ರೀಕರಣಕ್ಕಾಗಿ ವಿದೇಶದಲ್ಲಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಅವರು ಹುಟ್ಟುಹಬ್ಬವನ್ನು ಚಿತ್ರತಂಡದೊಂದಿಗೆ ಸೆಲಬ್ರೇಟ್ ಮಾಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಸುವರ್ಣ ವಾಹಿನಿಯ ಗೇಮ್ ಶೋ 'ಕನ್ನಡದ ಕೋಟ್ಯಾಧಿಪತಿ' ಸೆಟ್‌ನಲ್ಲಿ ಅವರು ತಮ್ಮ 37ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ವಿಶೇಷ ಸಂಚಿಕೆಯನ್ನು ಗುರುವಾರ (ಮಾ.15) ರಾತ್ರಿ 8ಕ್ಕೆ ಸುವರ್ಣ ವಾಹಿನಿಯಲ್ಲಿ ನೋಡಿ ಆನಂದಿಸಬಹುದು.
ಪುನೀತ್ ರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬನ್ನು ಕೋಟ್ಯಾಧಿಪತಿ ಸೆಟ್‌ನಲ್ಲಿ ಆಚರಿಸಿಕೊಂಡಿರುವುದು ನಮಗೆ ಸಂತಸ ತಂದಿಗೆ ಎಂದು ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ. ಹಿಂದಿಯ 'ಕೌನ್ ಬನೇಗಾ ಕರೋಡ್‌ಪತಿ' ರಿಯಾಲಿಟಿ ಶೋನ ಕನ್ನಡ ರೂಪವೇ 'ಕನ್ನಡದ ಕೋಟ್ಯಾಧಿಪತಿ'. ಇಂದು (ಮಾ.15) ರಾತ್ರಿ 8ಕ್ಕೆ ಡೋಂಟ್ ಮಿಸ್ ಪುನೀತ್ ಹುಟ್ಟುಹಬ್ಬ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











