»   » ಹಂಚುತ್ತಾ ಬೆಳೆಯುವ ತಂಗಿ ರಾಧಿಕಾ

ಹಂಚುತ್ತಾ ಬೆಳೆಯುವ ತಂಗಿ ರಾಧಿಕಾ

Subscribe to Filmibeat Kannada

ಇಷ್ಟುದಿನ ಅಜ್ಞಾತವಾಸದಲ್ಲಿದ್ದು ಗುಂಡುಗುಂಡಾಗಿರುವ ಕನ್ನಡ ಚಿತ್ರೋದ್ಯಮದ 'ತಂಗಿ' ರಾಧಿಕಾ ಆಗಾಗ ನಟನೆಯಲ್ಲದೆ ಚಿತ್ರ ಹಂಚಿಕೆಯಲ್ಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಲು ಮುಂದಾಗಿದ್ದಾರೆ. ತಾವೇ ನಾಯಕ ನಟಿಯಾಗಿರುವ 'ಈಶ್ವರ್' ಚಿತ್ರದ ಹಂಚಿಕೆಯನ್ನು 2.5 ಕೋಟಿ ರು. ಗಳಿಗೆ ಕೊಂಡುಕೊಳ್ಳಲು ಒಪ್ಪಿದ್ದಾರೆ. ಚಿತ್ರ ನಿರ್ಮಾಪಕರಾದ ಶಂಕರೇಗೌಡರು ಹಂಚಿಕೆ ಹಕ್ಕುಗಳ ಖರೀದಿ ವ್ಯಾಪಾರದಲ್ಲಿ ರಾಧಿಕಾ ಮುಂಗಡ ಹಣ 75 ಲಕ್ಷವನ್ನು ಈಗಾಗಲೇ ಪಾವತಿಸಿದ್ದಾರೆಂದು ಹೇಳಿದ್ದಾರೆ.

'ಈಶ್ವರ್' ಚಿತ್ರವನ್ನು ಈ ಮುಂಚೆ 'ನರಸಿಂಹ' ಎಂದು ಇಡಲಾಗಿತ್ತು .ಎನ್ ಓಂಪ್ರಕಾಶ್ ರಾವ್ ಚಿತ್ರದ ನಿರ್ದೇಶಕರು ಮತ್ತು ನಾಯಕ ನಟನಾಗಿ ಆದಿತ್ಯ ನಟಿಸಿದ್ದಾರೆ.ಈಗಾಗಲೇ ಚಿತ್ರದ ಬಿಡುಗಡೆ ತಡವಾಗಿರುವುದಕ್ಕೆ ಕಾರಣ ಕೇಳಿದ್ದರೆ ಓಂಪ್ರಕಾಶ್ ರಾವ್ ಅವರು ಸ್ವಲ್ಪ ಇರುಸುಮುರುಸು ಪಟ್ಟುಕೊಳ್ಳುತ್ತಾರೆ.ಹಂಚಿಕೆಯೇನು ರಾಧಿಕಾಗೆ ಹೊಸ ಅನುಭವವಲ್ಲ ಈ ಹಿಂದೆ ತಾವೇ ನಟಿಸಿದ ಸಾಧುಕೋಕಿಲ ನಿರ್ದೇಶನದ ಉಪೇಂದ್ರ ಮತ್ತು ದರ್ಶನ್ ಅಭಿನಯದ ಸ್ವಂತದಲ್ಲದ ತಮಿಳಿನ ಪಿತಾಮಗನ್ ರೀಮೇಕ್ 'ಅನಾಥರು'ಚಿತ್ರದ ಹಂಚಿಕೆಯಲ್ಲಿ ರು. 2.5 ಕೋಟಿ ರೂಪಾಯಿ ಬಂಡವಾಳ ತೊಡಗಿಸಿದ್ದರು.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...