For Quick Alerts
  ALLOW NOTIFICATIONS  
  For Daily Alerts

  ಆಲಯ ನಿರ್ಮಾಣಕ್ಕೆ ಮುಂದಾದ ರಾಘವ ಲಾರೆನ್ಸ್

  By Rajendra
  |

  ರಾಘವ ಲಾರೆನ್ಸ್ ಎಂದರೆ ಸಾಮಾನ್ಯವಾಗಿ ಎಲ್ಲರೂ ಈತ ಕ್ರಿಶ್ಚಿಯನ್ ಇರಬಹುದೇನೋ ಎಂದು ಭಾವಿಸುತ್ತಾರೆ. ಈತನ ಮೂಲ ಹೆಸರು ರಾಘವ ಮುರುಗಯ್ಯನ್. ಚಿತ್ರರಂಗಕ್ಕೆ ಬಂದ ಬಳಿಕ ತನ್ನ ಹೆಸರನ್ನು ಲಾರೆನ್ಸ್ ರಾಘವೇಂದ್ರ ಎಂದು ಬದಲಾಯಿಸಿಕೊಂಡ. ಈತನ ಹಿಪ್ ಅಪ್ ಹಾಗೂ ಪಾಶ್ವಿಮಾತ್ಯ ನೃತ್ಯ ಸಂಯೋಜನೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ.

  ವಿಷಯ ಏನಪ್ಪಾ ಅಂದ್ರೆ...ಡ್ಯಾನ್ಸ್‌ನಲ್ಲಿ ಪ್ರಭುದೇವ ನಂತರ ಅಷ್ಟೇ ಹೆಸರನ್ನು ಸಂಪಾದಿಸಿಕೊಂಡ ಈತ ಈಗ ದೇವಸ್ಥಾನವೊಂದನ್ನು ಕಟ್ಟಿಸಲು ಮುಂದಾಗಿದ್ದಾನೆ. ತಮಿಳುನಾಡಿನಲ್ಲಿ ಇದಕ್ಕಾಗಿ ಸ್ಥಳವನ್ನು ನೋಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತ ತೀರಾ ಇತ್ತೀಚೆಗೆ ಆಂಧ್ರಪ್ರದೇಶದ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾನೆ.

  ಶ್ರೀಕಾಳಹಸ್ತಿಯಲ್ಲಿ ರಾಘವ ಲಾರೆನ್ಸ್‌ಗೆ ವಿಐಪಿ ದರ್ಶನ ಕಲ್ಪಿಸಲಾಗಿತ್ತು. ಅಲ್ಲಿ ಆತ ರಾಹುಕೇತು ವಿಶೇಷ ಪೂಜೆಗಳನ್ನು ನಿರ್ವಹಿಸಿದ್ದಾನೆ. ಇದೆಲ್ಲಾ ಮಂದಿರ ನಿರ್ಮಾಣಕ್ಕಾಗಿ ಮಾಡಿ ಪೂಜೆ ಎನ್ನಲಾಗಿದೆ. ಈ ಹಿಂದೆ ಈತ ಬೆಳಗಾವಿ ಬೆಡಗಿ ಲಕ್ಷ್ಮಿ ರೈ ಜೊತೆ ಕುಚ್ ಕುಚ್ ನಡೆಸಿದ್ದ ಎಂಬ ಮಾತುಗಳು ಕೇಳಿಬಂದಿದ್ದವು. (ಏಜೆನ್ಸೀಸ್)

  English summary
  Raghava Lawrence, choreographer who has also appeared in films as an actor, director, composer and playback singer recently visits Sri Kalahasti Temple and performs Rahu Ketu poojas. Sources says that he is planning to constuct a temple in Tamilnadu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X