ರಜನಿಕಾಂತ್ ಜೊತೆಗೆ ಸ್ನೇಹಾ ಕಟ್ಟಕಡೆಯ ಚಿತ್ರ
ನಟಿ ನಯನತಾರಾ ಹಾದಿಯಲ್ಲೇ ಮತ್ತೊಬ್ಬ ಸಿನಿಮಾ ತಾರೆ ಸ್ನೇಹಾ ಬಿರುಸಿನ ಹೆಜ್ಜೆ ಹಾಕಿದ್ದಾರೆ. ಶೀಘ್ರದಲ್ಲೇ ಸ್ನೇಹಾ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗಿನ 'ಕೋಚಡಯಾನ್' ಚಿತ್ರವೇ ಸ್ನೇಹಾಳ ಕೊನೆಯ ಚಿತ್ರವಾಗಲಿದೆ.
ಸದ್ಯಕ್ಕೆ ಸ್ನೇಹಾ ಮದುವೆ ಗುಂಗಿನಲ್ಲಿದ್ದು, ಮದುವೆ ಬಳಿಕ ಆಕೆ ಸಿನಿಮಾಗೆ ಗುಡ್ ಬೈ ಹೇಳುವುದು ಖಚಿತವಾಗಿದೆ. ಈಗ ಆಕೆಗೆ ಬರುತ್ತಿರುವ ಆಫರ್‌ಗಳನ್ನು ಒಪ್ಪುತ್ತಿಲ್ಲ. ಯಾವೊಂದು ಚಿತ್ರಕ್ಕೂ ಸಹಿಹಾಕಿಲ್ಲ. ಬಹುಶಃ ರಜನಿ ಜೊತೆಗಿನ 'ಕೋಚಡಯಾನ್' ಚಿತ್ರವೇ ಸ್ನೇಹಾರ ಕೊನೆಯ ಚಿತ್ರವಾಗಲಿದೆ ಎನ್ನುತ್ತವೆ ಮೂಲಗಳು.
ಮಾರ್ಚ್ 2012ರಲ್ಲಿ ತನ್ನ ಬಾಯ್ ಫ್ರೆಂಡ್ ಪ್ರಸನ್ನರ ಕೈಹಿಡಿಯಲಿದ್ದಾರೆ ಸ್ನೇಹಾ. ಅಂದಹಾಗೆ ಸ್ನೇಹಾ ಕನ್ನಡದ 'ರವಿಶಾಸ್ತ್ರಿ' ಸೇರಿದಂತೆ 7'ಓ ಕ್ಲಾಕ್, 'ಆಗೋದೆಲ್ಲಾ ಒಳ್ಳೇದಕ್ಕೆ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂದೆ ಮನಸ್ಸು ಬದಲಾಯಿಸಿಕೊಳ್ಳುತ್ತಾರೋ ಇಲ್ಲವೋ ನೋಡೋಣ. (ಏಜೆನ್ಸೀಸ್)
More from Filmibeat
English summary
South Indian actress Sneha seems to be following Nayantara's footsteps, as she has chosen a big film to say adieu to acting. The actress, who has announced her marriage plans, will be reportedly bidding goodbye to movies after Rajinikanth's Kochadaiyaan.


Click it and Unblock the Notifications











