ಈ ವಾರ 'ರಾಮ್' ಜೊತೆ 'ಕಳ್ಳರ ಸಂತೆ'

By Staff

ಈ ವಾರ (ಡಿ.18) ಬಹು ನಿರೀಕ್ಷಿತ ಎರಡು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಪಾರ ವೆಚ್ಚದಲ್ಲಿ, ಅದ್ದೂರಿ ತಾರಾಗಣದೊಂದಿಗೆ ನಿರ್ಮಾಣವಾಗಿರುವ 'ರಾಮ್' ಚಿತ್ರವನ್ನು ಕೆ.ಮಾದೇಶ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಚಿತ್ರಕಥೆಯನ್ನೂ ಇವರೇ ಬರೆದಿರುವುದು ವಿಶೇಷ.

ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ಚಿತ್ರದ ನಾಯಕನಾದರೆ, ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ 'ರಾಮ್' ನ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಪ್ರಿಯಾಮಣಿ ನಟಿಸಿರುವ ಪ್ರಥಮ ಕನ್ನಡ ಚಿತ್ರ ಕೂಡ. ವಿವಿಧ ಸಾಹಿತಿಗಳು ರಚಿಸಿರುವ ಚಿತ್ರದ ಗೀತೆಗಳಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಧ್ವನಿಸುರುಳಿಗಳು ಕೇಳುಗರ ಮನ ಗೆದ್ದಿದೆ.

ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನವಿದೆ. ಪಳನಿರಾಜ್, ರವಿವರ್ಮ ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಪುನೀತ್‌ರಾಜಕುಮಾರ್, ಪ್ರಿಯಾಮಣಿ, ರಂಗಾಯಣ ರಘು, ಸಾಧುಕೋಕಿಲಾ, ಶ್ರೀನಾಥ್, ಸಂಗೀತಾ, ಚಿತ್ರಾಶೆಣೈ, ಜ್ಯೋತಿ, ದೊಡ್ಡಣ್ಣ, ಪದ್ಮಾವಾಸಂತಿ ಮುಂತಾದವರಿದ್ದಾರೆ.

ಕಳ್ಳರ ಸಂತೆ
ಮೇಘ ಮೂವೀಸ್ ಲಾಂಛನದಲ್ಲಿ ಸೈಯ್ಯದ್ ಅಮಾನ್ ಹಾಗೂ ರವೀಂದ್ರ ಅವರು ನಿರ್ಮಿಸಿರುವ 'ಕಳ್ಳರ ಸಂತೆ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಆ ದಿನಗಳು' ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ, 'ಸ್ಲಂ ಬಾಲ' ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದ ಸುಮನಾ ಕಿತ್ತೂರು ಈ ಚಿತ್ರದ ನಿರ್ದೇಶಕಿ.

ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಪತ್ರಕರ್ತ ಆಗ್ನಿಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳು ಕೇಳುಗರ ಪ್ರಶಂಸೆಗೆ ಪಾತ್ರವಾಗಿದ್ದು, ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಆಡೀಯೋ ಕಂಪನಿ ಮಾಲೀಕರು ತಿಳಿಸಿದ್ದಾರೆ.

ಸುಂದರನಾಥ ಸುವರ್ಣ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಸುಮನಾ ಕಿತ್ತೂರು ಹಾಗೂ ವಿ.ಮನೋಹರ್ ಗೀತರಚನೆ, ಡಿಫ಼ರೆಂಟ್ ಡ್ಯಾನಿ ಸಾಹಸ, ಮದನ್ ಹರಿಣಿ ನೃತ್ಯ ಹಾಗೂ ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಹರಿಪ್ರಿಯ, ಕಿಶೋರ್, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X