»   » ಬೆಳ್ಳಿ ಪರದೆಗೆ ಅಭಿನೇತ್ರಿ ಶ್ರೀದೇವಿ ಮಗಳು ಜಾನ್ವಿ

ಬೆಳ್ಳಿ ಪರದೆಗೆ ಅಭಿನೇತ್ರಿ ಶ್ರೀದೇವಿ ಮಗಳು ಜಾನ್ವಿ

Posted By:
Subscribe to Filmibeat Kannada

ಎಪ್ಪತ್ತು ಎಂಬತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡ ನಾಯಕಿ ಶ್ರೀದೇವಿ. ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಮನೆ ಮಾತಾದ ತಾರೆ. 1996ರಲ್ಲಿ ಹಿಂದಿನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದ ಬಳಿಕ ಮುಂಬೈನಲ್ಲಿ ನೆಲೆಗೊಂಡರು.

ಶ್ರೀದೇವಿ ಹಾಗೂ ಬೋನಿ ಕಪೂರ್ ಪ್ರೀತಿಗೆ ಸಾಕ್ಷಿಯಾಗಿ ಈಗ ಇಬ್ಬರು ಮಕ್ಕಳು ಜಾನ್ವಿ ಹಾಗೂ ಖುಷಿ.ಈಗ ಜಾನ್ವಿಯನ್ನು ಬೆಳ್ಳಿ ಪರದೆಗೆ ತರುವ ಸಿದ್ಧತೆಯಲ್ಲಿದ್ದಾರೆ ಶ್ರೀದೇವಿ. ವಿಶೇಷ ಎಂದರೆ ದಕ್ಷಿಣದ ಚಿತ್ರದ ಮೂಲಕವೇ ತಮ್ಮ ಮಗಳನ್ನು ಪರಿಚಯಿಸಬೇಕು ಎಂಬುದು ಶ್ರೀದೇವಿ ದಂಪತಿಗಳ ಕನಸು.

ಈಗಾಗಲೆ ತೆಲುಗು ಚಿತ್ರರಂಗದ ಹೀರೋ ನಾಗಾರ್ಜುನ ಅವರನ್ನು ಸಂಪರ್ಕಿಸಿರುವ ಶ್ರೀದೇವಿ, ತಮ್ಮ ಮಗಳನ್ನು ನಾಗಾರ್ಜುನ ಕಿರಿಯ ಪುತ್ರ ಅಕಿಲ್ ಜೊತೆ ನಟಿಸಲು ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ಚಿತ್ರಕತೆಗಳ ಆಯ್ಕೆಯಲ್ಲಿ ಶ್ರೀದೇವಿ ಬ್ಯುಸಿಯಾಗಿದ್ದಾರೆ. (ಏಜೆನ್ಸೀಸ್)

English summary
Sridevi, former dream actress of Bollywood has decided to launch her elder daughter Jaanvi in Tamil film as heroine.She has also approached Nagarjuna and requested him to pair her daughter Jaanvi with his youngest son Akil. Selection of the story is going on top gear.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada