ಕಿಚ್ಚ ಹುಚ್ಚ ಸುದೀಪ್‌ಗೆ ಭರ್ಜರಿ ಓಪನಿಂಗ್
ಈ ಶುಭ ಶುಕ್ರವಾರದಂದು (ಅ.15) ರಾಜ್ಯದಾದ್ಯಂತ ತೆರೆಕಂಡಿರುವ 'ಕಿಚ್ಚ ಹುಚ್ಚ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುದೀಪ್ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದು ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರ ನೋಡಿದ ಪ್ರೇಕ್ಷಕರು ಸೂಪರ್ ಎಂದು ಉದ್ಗಾರ ತೆಗೆದಿದ್ದಾರೆ.
ತಮಿಳಿನಲ್ಲಿ ಯಶಸ್ವಿಯಾದ 'ಚಿತ್ರಂ ಪೆಸುತ್ತಾಡಿ' ಚಿತ್ರದ ರೀಮೇಕ್ ಇದಾಗಿದೆ. ಈ ಚಿತ್ರ ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ಸುದೀಪ್ ಇದ್ದಾರೆ. ರಮ್ಯಾ ಮತ್ತು ಸುದೀಪ್ ಜೋಡಿ ಮತ್ತೊಮ್ಮೆ ಮೋಡಿ ಮಾಡುತ್ತಿದ್ದು ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಸರಾಗವಾಗಿ ಸರಿದು ಹೋಗುವ ಕತೆ. ಪಾತ್ರಗಳಲ್ಲಿನ ಜೀವಂತಿಕೆಯೇ ತಮ್ಮ ಚಿತ್ರದ ಪ್ಲಸ್ ಪಾಯಿಂಟ್ ಎಂದು ಸುದೀಪ್ ಹೇಳಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಕೇಳುತ್ತಿದ್ದರೆ ಸುದೀಪ್ ಮಾತುಗಳು ನಿಜ ಅನ್ನಿಸುತ್ತಿವೆ. ಕೆ ಮಂಜು ನಿರ್ಮಾಣದ ಈ ಚಿತ್ರಕ್ಕೆ ಚಿ ಗುರುದತ್ ಆಕ್ಷನ್, ಕಟ್ ಹೇಳಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡುಗಳು ಸೊಗಸಾಗಿ ಮೂಡಿಬಂದಿರು ಬಗ್ಗೆ ಪ್ರೇಕ್ಷಕ ಖುಷಿಯಾಗಿದ್ದಾನೆ.


Click it and Unblock the Notifications











