ತಮನ್ನಾ ಭಾಟಿಯಾ ರೇಟು ಮೂರು ನಿಮಿಷಕ್ಕೆ ಮೂರು ಲಕ್ಷ
ಹೆಂಗಸರ ವಯಸ್ಸು ಗಂಡಸರ ಸಂಬಳ ಕೇಳಬಾರದು ಎಂಬ ಮಾತಿದೆ. ಆದರೆ ಹೆಂಗಸರ ಸಂಬಳ ಕೇಳಬಾರದು ಎಂಬ ಮಾತು ಬಹುಶಃ ಇರಲಿಕ್ಕ್ಕಿಲ್ಲ. ಹಾಗಾಗಿಯೇ ವೈಟ್ ಬ್ಯೂಟಿ ತಮನ್ನಾ ಧೈರ್ಯವಾಗಿ ತಮ್ಮ ರೇಟನ್ನು ತಿಳಿಸಿದ್ದಾರೆ. ಇಲ್ಲಿ ರೇಟು ಎಂದರೆ ತಪ್ಪಾಗಿ ತಿಳಿಯದೆ ಸಂಭಾವನೆ ಎಂದು ಅರ್ಥೈಸಬೇಕಾಗಿ ವಿನಂತಿ.
ಈಗ ಈಕೆ ತೆಲುಗು, ತಮಿಳಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಮೂರು ನಿಮಿಷಕ್ಕೆ ಮೂರು ಲಕ್ಷ ಪಡೆಯುತ್ತಾರೆ ಎಂದರೆ ನೀವೇ ಯೋಚಿಸಿ ಈಕೆಗೆ ಯಾವ ಪಾಟಿ ಬೇಡಿಕೆ ಇದೆ ಎಂದು. ಇತ್ತೀಚೆಗೆ ತೆಲುಗು ಚಿತ್ರವೊಂದರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮನ್ನಾ ಕುಣಿದು ಕುಪ್ಪಳಿಸಿದರು. ಮೂರು ನಿಮಿಷ ಕುಣಿದಿದ್ದಕ್ಕೆ ಮೂರು ಲಕ್ಷ ಚಾರ್ಜು ಮಾಡಿದ್ದಾರೆ.
ಇಲಿಯಾನಾ ಕೂಡ ಕನ್ನಡದ 'ಹುಡುಗ ಹುಡುಗಿ' ಚಿತ್ರದ ಹಾಡೊಂದಕ್ಕೆ ರು.30 ಲಕ್ಷ ಚಾರ್ಜ್ ಮಾಡಿದ್ದರು. ಈಗ ಇಲಿಯಾನಾ ಸಹ ತೆಲುಗಿನಲ್ಲಿ ಸ್ಟೇಜ್ ಶೋಗಳಿಗೆ ಸಿಕ್ಕಾಪಟ್ಟೆ ಚಾರ್ಜ್ ಮಾಡುತ್ತಿದ್ದಾರೆ. ಸಿನಿಮಾ ಒಂದರಿಂದ ಪಡೆಯುವ ಸಂಭಾವನೆಗಿಂತ ಈ ರೀತಿಯ ಕಾರ್ಯಕ್ರಮಗಳಿಂದ ನಟಿಯರ ಖಾತೆಗೆ ಭಾರಿ ಹಣ ಜಮೆಯಾಗುತ್ತಿದೆ.


Click it and Unblock the Notifications











