ಸ್ವರ್ಣ ಕಮಲದ ಕುದುರೆಯೇರಿದ ಕನ್ನಡ ಸಿನೆಮಾ

By Rajendra

57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳನ್ನು ಇಂದು (ಸೆ.15) ದೆಹಲಿಯಲ್ಲಿ ಪ್ರಕಟಿಸಲಾಯಿತು. ಈ ಬಾರಿ ಕನ್ನಡಕ್ಕೆ ಪ್ರಶಸ್ತಿಗಳ ಸುರಿಮಳೆಯಾಗಿದೆ. ಕನ್ನಡಕ್ಕೆ ಎರಡು ಸ್ವರ್ಣ ಕಮಲ ಪ್ರಶಸ್ತಿ ಸೇರಿದಂತೆ ಅತ್ಯುತ್ತಮ ಚಿತ್ರಕಥೆ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳು ಪ್ರಾಪ್ತವಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ನೆಲೆಸಿದೆ.

ಪಿ ಎನ್ ರಾಮಚಂದ್ರ ಅವರು ನಿರ್ದೇಶಿಸಿರುವ 'ಪುಟಾಣಿ ಪಾರ್ಟಿ' ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಆಯ್ಕೆಯಾಗಿದ್ದು ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿದೆ. 'ಪಾ' ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ ಅರುಂಧತಿ ನಾಗ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಲಾಗಿದೆ.

ಕನ್ನಡ ಚಲನಚಿತ್ರ ಕ್ಷೇತ್ರದ ಬಗೆಗೆ ಕೆ ಪುಟ್ಟಸ್ವಾಮಿ ಅವರು ಬರೆದಿರುವ ವಿಭಿನ್ನ 'ಸಿನಿಮಾ ಯಾನ' ಕೃತಿಗೆ ಈ ಬಾರಿ ಸ್ವರ್ಣ ಕಮಲ ಬಂದಿರುವುದು ವಿಶೇಷ. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕನಸೆಂಬ ಕುದುರೆಯನೇರಿ' ಚಿತ್ರದ ಚಿತ್ರಕಥೆಗಾಗಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೋಪಾಲಕೃಷ್ಣ ಪೈ ಅವರ ಪಾಲಾಗಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಪ್ರಶಸ್ತಿ ಪಟ್ಟಿ ಹೀಗಿದೆ.

* ಅತ್ಯುತ್ತಮ ಚಿತ್ರ: ಕುಟ್ಟಿ ಸ್ರಾಂಕು (ಮಲಯಾಳಂ)
* ಅತ್ಯುತ್ತಮ ನಟ: ಅಮಿತಾಬ್ ಬಚ್ಚನ್ (ಪಾ)
* ಅತ್ಯುತ್ತಮ ನಟಿ: ಅನನ್ಯ ಚಟರ್ಜಿ(ಅಬೊಹೋಮಾನ್ /ಬಂಗಾಳಿ ಚಿತ್ರ)
* ಅತ್ಯುತ್ತಮ ಮನರಂಜನಾತ್ಮಕ ಚಿತ್ರ: ತ್ರೀ ಈಡಿಯಟ್ಸ್
* ಅತ್ಯುತ್ತಮ ನಿರ್ದೇಶಕ: ರಾಜು ಹಿರಾನಿ (ತ್ರೀ ಈಡಿಯಟ್ಸ್/ಹಿಂದಿ) ಹಾಗೂ ರಿತುಪರ್ಣ ಘೋಷ್ (ಅಬೊಹೊಮಾನ್/ಬಂಗಾಳಿ)
* ಅತ್ಯುತ್ತಮ ನಿರ್ಮಾಪಕ: ವಿಧು ವಿನೋದ್ ಚೋಪ್ರಾ (ತ್ರೀ ಈಡಿಯಟ್ಸ್/ಹಿಂದಿ)
* ಅತ್ಯುತ್ತಮ ಪೋಷಕ ನಟ: ಫರೂಕ್ ಶೇಕ್(ಲಾಹೋರ್/ಹಿಂದಿ)
* ಅತ್ಯುತ್ತಮ ಪೋಷಕ ನಟಿ: ಅರುಂಧತಿ ನಾಗ್ (ಪಾ/ಹಿಂದಿ)
* ಅತ್ಯುತ್ತಮ ಸಾಮಾಜಿಕ ಚಿತ್ರ: ವೆಲ್ ಡನ್ ಅಬ್ಬ(ಹಿಂದಿ)
* ಅತ್ಯುತ್ತಮ ನೃತ್ಯ ನಿರ್ದೇಶನ: ಕೆ ಶಿವಶಂಕರ್ (ಮಗಧೀರ/ತೆಲುಗು)
* ಅತ್ಯುತ್ತಮ ಬಾಲ ಕಲಾವಿದ: ಜಿವಾ, ಅನ್ಬ ಕರಸು(ಪಸಂಗ/ತಮಿಳು)
* ಅತ್ಯುತ್ತಮ ಮಕ್ಕಳ ಚಿತ್ರ: ಪುಟಾಣಿ ಪಾರ್ಟಿ
* ಅತ್ಯುತ್ತಮ ಛಾಯಾಗ್ರಹಣ: ಅಂಜಲಿ ಶುಕ್ಲ (ಕುಟ್ಟಿ ಸ್ರಾಂಕು/ಮಲಯಾಳಂ)
* ಅತ್ಯುತ್ತಮ ಸಂಗೀತ ನಿರ್ದೇಶಕ: ಅಮಿತ್ ತ್ರಿವೇದಿ (ಡೇವ್ ಡಿ)
* ಅತ್ಯುತ್ತಮ ಹಿನ್ನೆಲೆ ಗಾಯಕ: ರೂಪಂ ಇಸ್ಲಾಂ(ಮಹಾನಗರ್)
* ಅತ್ಯುತ್ತಮ ಹಿನ್ನೆಲೆ ಗಾಯಕಿ: ನೀಲಾಂಜನ ಸರ್ಕಾರ್ (ಹೌಸ್ ಫುಲ್/ಹಿಂದಿ)
* ಅತ್ಯುತ್ತಮ ಸೌಂಡ್ ಎಂಜಿನಿಯರ್: ರಸೂಲ್ ಪೂಕುಟ್ಟಿ
* ಅತ್ಯುತ್ತಮ ಗೀತ ಸಾಹಿತ್ಯ: ಸ್ವಾನಂದ್ ಕಿರ್‌ಕಿರೆ (ತ್ರೀ ಈಡಿಯಟ್ಸ್/ಬೆಹತಿ ಹವಾ...ಸಾಹಿತ್ಯ)
* ಅತ್ಯುತ್ತಮ ರಾಷ್ಟ್ರೀಯ ಏಕತೆ ಚಿತ್ರ: ಡೆಲ್ಲಿ 6 (ಹಿಂದಿ)
* ಅತ್ಯುತ್ತಮ ಹಿಂದಿ ಚಿತ್ರ: ಪಾ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X