ಏಪ್ರಿಲ್‌ನಲ್ಲಿ ಗಣೇಶನ 'ಉಲ್ಲಾಸ ಉತ್ಸಾಹ'

By Rajendra

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಬಿ.ಪಿ.ತ್ಯಾಗರಾಜ್ ತಿಳಿಸಿದ್ದಾರೆ.ಕನ್ನಡದವರಾದ ಯಶೋಸಾಗರ್ ಹಾಗೂ ಸ್ನೇಹಾ ಉಲ್ಲಾಳ್ ಅಭಿನಯದಲ್ಲಿ ತೆಲುಗು ಭಾಷೆಯಲ್ಲಿ ಅತ್ಯಂತ ಯಶಸ್ಸು ಕಂಡ ಚಿತ್ರ 'ಉಲ್ಲಾಸಂಗ ಉತ್ಸಾಹಂಗ'. ಇದೇ ಚಿತ್ರ ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ' ಶೀರ್ಷಿಕೆಯಿಂದ ನಿರ್ಮಾಣವಾಗಿದೆ ಕಾಂತಿಸಿನಿ ಕ್ರಿಯೇಷನ್ಸ್ ಮೂಲಕ.

ಹದಿಹರೆಯದ ಹುಡುಗರ ಹುಡುಗಾಟ ಹಾಗೂ ಆ ಹುಡುಗಾಟದಲ್ಲಿ ಹುಟ್ಟುವ ಪ್ರೀತಿ, ಅದರ ಪೋಷಣೆ ಹೀಗೆ ಹಲವು ಸ್ವಾರಸ್ಯಕರ ಘಟನೆಗಳನ್ನೊಳಗೊಂಡ ಈ ಚಿತ್ರ ಬೇಸಿಗೆ ರಜೆಯ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದು, ಚಿತ್ರರಸಿಕರಿಗೆ ರಂಜನೆಯ ರಸದೌತಣ ನೀಡಲಿದೆ ಎನ್ನುತ್ತಾರೆ ನಿರ್ದೇಶಕ ದೇವರಾಜ್‌ಪಾಲನ್.

ಜಿ.ವಿ.ಪ್ರಕಾಶ್‌ಕುಮಾರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಕರುಣಾಕರನ್ ಕಥೆ ಬರೆದಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್, ದತ್ತಣ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರ್ರದ ತಾರಾಬಳಗದಲ್ಲಿ ಗಣೇಶ್, ಯಾಮಿಗೌತಮಿ, ರಂಗಾಯಣರಘು, ಸಾಧುಕೋಕಿಲಾ, ತುಳಸಿಶಿವಮಣಿ, ಪ್ರೀತಿಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಮುಂತಾದವರಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X