ರಾಕ್ ಲೈನ್ ಸ್ಟುಡಿಯೋದಲ್ಲಿ ಮಾಲಾಶ್ರೀ 'ವೀರ'
ಮಾಲಾಶ್ರೀ ಅಭಿನಯದ ಮತ್ತೊಂದು ಚಿತ್ರ ಯಾವುದೇ ಸದ್ದುಗದ್ದಲವಿಲ್ಲದೇ ಆರಂಭವಾಗಿ ಬಿರುಸಿನಿಂದ ಚಿತ್ರೀಕರಣ ಮುಂದುವರೆದಿದೆ. ರಾಮು ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ, ಮತ್ತೊಂದು ಅದ್ದೂರಿ ಚಿತ್ರ 'ವೀರ' ಬಿರುಸಿನ ಚಿತ್ರೀಕರಣ ಈಗ ನಗರದಲ್ಲಿ ನಡೆದಿದೆ.
ಚಿತ್ರಕ್ಕಾಗಿ ರಾಕ್‌ಲೈನ್ ಸ್ಟುಡಿಯೋವಿನಲ್ಲಿ ಇಸ್ಮಾಯಿಲ್ ಕಲಾ ನಿರ್ದೇಶನದಲ್ಲಿ ಹಾಕಿದ್ದ ಭವ್ಯ ಢೂಮ್ ಸೆಟ್‌ನಲ್ಲಿ ಮಾಲಾಶ್ರೀ, ರಾಹುಲ್‌ದೇವ್, 20 ಜನ ವಿದೇಶಿ ಸಹ ಕಲಾವಿದರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಸೂಪರ್ ಸಾನಿಕ್ ಹಾಗೂ 435 ಕ್ಯಾಮೆರಾ ಬಳಸಿ ಮತ್ತು 10 ಜನ ವಿದೇಶಿ ಡ್ಯಾನ್ಸರ‍್ಸ್ ಭಾಗವಹಿಸಿದ ಒಂದು ಗೀತೆಯನ್ನು ಇಮ್ರಾನ್ ನೃತ್ಯ ನಿರ್ದೇಶನದೊಂದಿಗೆ ರಾಜೇಶ್ (ಬಾಂಬೆ) ಛಾಯಾಗ್ರಹಣದಲ್ಲಿ ನಿರ್ದೇಶಕ ಎಂ.ಕೆ. ಶರ್ಮ ಚಿತ್ರಿಸಿಕೊಂಡರು.
ಚಿತ್ರಕ್ಕೆ ರವಿ ಶ್ರೀವತ್ಸ ಸಂಭಾಷಣೆ, ವರದನ್ (ಜೋಷ್ ಖ್ಯಾತಿ) ಸಂಗೀತ, ರಾಜೇಶ್ (ಬಾಂಬೆ) ಛಾಯಾಗ್ರಹಣ, ಇಮ್ರಾನ್ ನೃತ್ಯ, ರಾಮ್ ಲಕ್ಷ್ಮಣ್ ರಾಖೀ ರಾಜೇಶ್, ವಿಜಯ್ ಸಾಹಸ, ರಮೇಶ್ ಬಾಬು ನಿರ್ಮಾಣ ನಿರ್ವಹಣೆ ಶೇಷು ನಿರ್ದೇಶನ ಸಹಕಾರವಿದ್ದು, ಆಯುಧ, ಚಾಮುಂಡಿ, ಚಿತ್ರಗಳನ್ನು ನಿರ್ದೇಶಿಸಿದ ಅಯ್ಯಪ್ಪ ಪಿ. ಶರ್ಮ, ಚಿತ್ರವನ್ನು ನಿರ್ದೇಶಿಸುತ್ತಿದ್ದು, ಎಂ.ಕೆ. ಶರ್ಮ ಆಗಿ ಪರಿಚಯವಾಗಲಿದ್ದಾರೆ.
ತಾರಾಗಣದಲ್ಲಿ ಮಾಲಾಶ್ರೀ , ರಾಧಿಕಾಗಾಂಧಿ, ಕೋಮಲ್‌ಕುಮರ್, ಅಶಿಷ್ ವಿದ್ಯಾರ್ಥಿ, ಸಯ್ಯಾಜಿ ಶಿಂಧೆ, ರಾಹುಲ್‌ದೇವ್ (ಬಾಂಬೆ) ಸಿ.ಆರ್.ಸಿಂಹ, ಸತ್ಯ (ಹೈದರಾಬಾದ್) ಶರಣ್ (ಹೈದರಾಬಾದ್) ದೊಡ್ಡಣ್ಣ, ಸಾಧುಕೋಕಿಲ, ಸತ್ಯಜಿತ್, ಹೆಚ್.ಎಂ.ಟಿ. ನಂದ ಮುಂತಾದವರಿದ್ದಾರೆ.


Click it and Unblock the Notifications











