ಪ್ರಕಾಶ್ ರೈ ರೂಪದಲ್ಲಿ ಎದ್ದು ಬಂದ ವೈಎಸ್‌ಆರ್!
ನಟ ಪ್ರಕಾಶ್ ರೈ ರೂಪದಲ್ಲಿ ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಎದ್ದುಬಂದರೆ? ಹೌದು ಎನ್ನುತ್ತಿದ್ದಾರೆ ತೆಲುಗು ಚಿತ್ರರಂಗದ ಹಿರಿಯ ನಟಿ ವಿಜಯ ನಿರ್ಮಲಾ. ಇವರು ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರ ಮಡದಿ. ಇತ್ತೀಚೆಗೆ ಇವರ ಪುತ್ರ ಮಹೇಶ್ ಬಾಬು ಅಭಿನಯದ 'ದೂಕುಡು' ಚಿತ್ರ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದಿದೆ.
ಈ ಚಿತ್ರದಲ್ಲಿ ಪ್ರಕಾಶ್ ರೈ ಕೂಡ ಅಭಿನಯಿಸಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಜಯ ನಿರ್ಮಲಾ ಅವರು, ಚಿತ್ರದಲ್ಲಿ ಪ್ರಕಾಶ್ ಅವರ ಪಾತ್ರವನ್ನು ನೋಡುತ್ತಿದ್ದರೆ ಕಣ್ಮರೆಯಾದ ವೈಎಸ್ ರಾಜಶೇಖರ ರೆಡ್ಡಿ ಅವರೇ ಎದ್ದುಬಂದಂತೆ ಭಾಸವಾಗುತ್ತಿತ್ತು ಎಂದಿದ್ದಾರೆ.
ಚಿತ್ರದಲ್ಲಿನ ಪ್ರಕಾಶ್ ರೈ ಅವರ ಪಾತ್ರದ ಬಗ್ಗೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಕಾಶ್ ರೈ ಅವರ ಪಾತ್ರ ಆಂಧ್ರದ ಕಾಂಗ್ರೆಸ್ ಮುಖಂಡ ದಿವಂಗತ ಪಿಜೆಆರ್ ಅವರಿಂದ ಪ್ರೇರಿತವಾಗಿತ್ತು. ಕೃಷ್ಣ ಹಾಗೂ ವಿಜಯ ನಿರ್ಮಲಾ ಅವರು ಕಾಂಗ್ರೆಸನ್ನು ಬಹಳ ದಿನಗಳಿಂದ ಬೆಂಬಲಿಸುತ್ತಾ ಬಂದವರು. ಅವರಿಗೆ ಪ್ರಕಾಶ್ ರೈ ಅವರ ಪಾತ್ರದಲ್ಲಿ ವೈಎಸ್‌ಆರ್ ಅಲ್ಲದೆ ಇನ್ಯಾರು ಕಾಣಲು ಸಾಧ್ಯ. (ಏಜೆನ್ಸೀಸ್)


Click it and Unblock the Notifications











