ಅಮೃತಧಾರೆ ಹುಡುಗನಿಗೆ ಕೂಡಿಬಂತು ಕಂಕಣಬಲ
'ನನ್ನ ಪ್ರೀತಿಯ ಹುಡುಗಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಧ್ಯಾನಗೆ ಕಂಕಣಬಲ ಕೂಡಿಬಂದಿದೆ. ಡಿಸೆಂಬರ್ 19ರಂದು ಧ್ಯಾನ್ ನಿಶ್ಚಿತಾರ್ಥ ತನ್ನ ಗೆಳತಿ ರಿತಿಕಾ ಜೊತೆ ಮುಂಬೈನಲ್ಲಿ ನಡೆಯಲಿದೆ. ಹಿಂದಿ ಚಿತ್ರರಂಗದಲ್ಲಿ ಸಮೀರ್ ದತ್ತಾನಿ ಎಂದೇ ಧ್ಯಾನ್ ಗುರುತಿಸಿಕೊಂಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತ ಧಾರೆ' ಚಿತ್ರ ಧ್ಯಾನ್‌ಗೆ ಹೆಸರು ತಂದುಕೊಟ್ಟಂತಹ ಚಿತ್ರ. ಇತ್ತೀಚೆಗೆ ತೆರೆಕಂಡ 'ಹುಡುಗ ಹುಡುಗಿ' ಚಿತ್ರವೂ ಪರ್ವಾಗಿಲ್ಲ ಎನ್ನಿಸಿಕೊಂಡಿತು. ಹಿಂದಿಯ 'ವೆಲ್ ಡನ್ ಅಬ್ಬಾ' ಹಾಗೂ 'ಐ ಹೇಟ್ ಲವ್ ಸ್ಟೋರೀಸ್' ಚಿತ್ರಗಳಲ್ಲೂ ಧ್ಯಾನ್ ಅಭಿನಯಿಸಿದ್ದಾರೆ.
ತನ್ನ 17ನೇ ವರ್ಷಕ್ಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟ ಧ್ಯಾನ್ ಬಳಿಕ ಕಿಶೋರ್ ನಮಿತಾ ಆಕ್ಟಿಂಗ್ ಸ್ಕೂಲ್‌ನಲ್ಲಿ ಅಭಿನಯದ ಅಆಇಈ ಕಲಿತಿದ್ದರು. ಧ್ಯಾನ್ ಒಪ್ಪಿಕೊಂಡಿರುವ ಕನ್ನಡದ 'ಸಿಹಿಮುತ್ತು', 'ಓ ಮನಸೇ', 'ಉದ್ಯಾನ್ ಎಕ್ಸ್‌ಪ್ರೆಸ್', 'ಮಥುರಾ ನಗರಿ' ಚಿತ್ರಗಳು ತೆರೆಕಾಣಬೇಕಾಗಿದೆ.
More from Filmibeat
English summary
Wedding bells for Kannada film actor Dhyan A.K.A Sameer Dattani. He is getting engaged on 19th December with his girl friend Rithika in Mumbai. Dhyan debuts with the Kannada movie Nanna Preethiya Hudugi.
ಧ್ಯಾನ್ ಹುಡುಗ ಹುಡುಗಿ ಮದುವೆ ಸಮೀರ್ ದತ್ತಾನಿ ವಿವಾಹ ಅಮೃತಧಾರೆ dhyan marriage sameer dattani amrutha dhaare wedding bells


Click it and Unblock the Notifications











