'ಆರ್ಯ' ಚಿತ್ರಕ್ಕೆ 15 ವರ್ಷ : ಫೀಲ್ ಮೈ ಲವ್ ಎಂದ ಅಲ್ಲು ಅರ್ಜುನ್
ಆರ್ಯ - ಗೀತಾ ಇಬ್ಬರ ಲವ್ ಸ್ಟೋರಿ ಎಂದು ಮರೆಯಲಾಗದು. ಸಿನಿಮಾ ಪ್ರೇಮಿಗಳು ತಮ್ಮದೆ ಪ್ರೇಮ ಕಥೆಯಂತೆ ಇಷ್ಟ ಪಟ್ಟು ನೋಡಿದ ಸಿನಿಮಾ 'ಆರ್ಯ'. ಇಂತಹ ಪ್ರೀತಿ ತುಂಬಿದ ಸಿನಿಮಾಗೆ ಈಗ 15 ವರ್ಷದ ಸಂಭ್ರಮ.
ನಟ ಅಲ್ಲು ಅರ್ಜುನ್ ಕೆರಿಯರ್ ನಲ್ಲಿ 'ಆರ್ಯ' ಸಿನಿಮಾ ದೊಡ್ಡ ಹೆಸರು ತಂದು ಕೊಟ್ಟಿದೆ. ತೆಲುಗಿನಲ್ಲಿ ಬಂದ ಸೂಪರ್ ಹಿಟ್ ಲವ್ ಸ್ಟೋರಿ 'ಆರ್ಯ' ಪ್ರಮುಖವಾಗಿದೆ. ಅಲ್ಲು ಅರ್ಜುನ್ ಹೃದಯಕ್ಕೆ ಈ ಸಿನಿಮಾ ಬಹಳ ಹತ್ತಿರವಾಗಿದೆ.
15 ವರ್ಷ ತುಂಬಿರುವ ಸಂತಸದಲ್ಲಿ ಸಿನಿಮಾದ ಬಗ್ಗೆ ಅಲ್ಲು ಅರ್ಜುನ್ ನಾಲ್ಕು ಸಾಲು ಬರೆದುಕೊಂಡಿದ್ದಾರೆ. ''ಫೀಲ್ ದಿ ಲವ್, ಈ ಸಿನಿಮಾ ನನ್ನ ಜೀವನದ ಮ್ಯಾಜಿಕಲ್ ಮೂವಿ. ನನ್ನ ಜೀವನವನ್ನು ಈ ಸಿನಿಮಾ ಬದಲು ಮಾಡಿದೆ. ಈ ಸಿನಿಮಾ ಬಂದು 15 ವರ್ಷ ಆಗಿದೆ ನಂಬಲು ಆಗುತ್ತಿಲ್ಲ.'' ಎಂದಿದ್ದಾರೆ.

ಜೊತೆಗೆ ನಿರ್ದೇಶಕ ಸುಕುಮಾರ್, ನಿರ್ಮಾಪಕ ದಿಲ್ ರಾಜು ಹಾಗೂ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್, ಛಾಯಾಗ್ರಾಹಕ ರತ್ನವೇಲುರಿಗೆ ಧನ್ಯವಾದ ತಿಳಿಸಿದ್ದಾರೆ. ವಿಶೇಷವಾಗಿ ಪ್ರೇಕ್ಷಕರಿಗೆ ಪ್ರೀತಿಯನ್ನು ನೆನೆದಿದ್ದಾರೆ.
'ಆರ್ಯ' ಸಿನಿಮಾ 2004 ಮಾರ್ಚ್ 7 ರಂದು ಬಿಡುಗಡೆಯಾಗಿತ್ತು. 4 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ 30 ಕೋಟಿ ಗಳಿಕೆಯನ್ನು ಆ ಕಾಲದಲ್ಲಿಯೇ ಮಾಡಿತ್ತು. ಇನ್ನು ಸಿನಿಮಾದ ಹಾಡುಗಳನ್ನು ಇಂದಿಗೂ ಪ್ರೇಕ್ಷಕರು ಮರೆತಿಲ್ಲ.


Click it and Unblock the Notifications











