'ಚೆಲುವಿನ ಚಿತ್ತಾರ'ದ ಐಸೂ ನೆನೆದು ನಟಿ ಅಮೂಲ್ಯ ಪತ್ರ!

ಸ್ಯಾಂಡಲ್​ವುಡ್​ನಲ್ಲಿ ಗೋಲ್ಡನ್​ ಕ್ವೀನ್ ಅಂತಲೇ ಕರೆಸಿಕೊಳ್ಳುವ ನಟಿ​ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ಅಮೂಲ್ಯ ದೂರಾಗಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಸುದ್ದಿ ಆಗಿದ್ದರು.

ನಟಿ ಅಮೂಲ್ಯ ಅಂದಾಕ್ಷಣ ಮಾದೇಸ, ಮಾದೇಸ ಎನ್ನುವ ಮುದ್ದು ಧ್ವನಿ ನೆನಪಾಗುತ್ತದೆ. ಹೌದು, ನಟಿ ಅಮೂಲ್ಯಗೆ ಬ್ರೇಕ್ ಕೊಟ್ಟ ಮೊದಲ ಸಿನಿಮಾ 'ಚೆಲುವಿನ ಚಿತ್ತಾರ'. ಈ ಚಿತ್ರದಲ್ಲಿ ಮುಗ್ಧ ಪ್ರೇಮಿಯ ಪಾತ್ರದಲ್ಲಿ ಅಮೂಲ್ಯ ನಟಿಸಿದ್ದರು.

ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ನಟಿ ಅಮೂಲ್ಯ ನೆನಪಿಸಿಕೊಂಡಿದ್ದಾರೆ. ಕಾರಣ ಈ ಸಿನಿಮಾ ತೆರೆಕಂಡು 15 ವರ್ಷ ಆಗಿದೆ.

ಅಮೂಲ್ಯಗೆ ಬ್ರೇಕ್ ಕೊಟ್ಟಿದ್ದು ಚೆಲುವಿನ ಚಿತ್ತಾರ!

ಅಮೂಲ್ಯಗೆ ಬ್ರೇಕ್ ಕೊಟ್ಟಿದ್ದು ಚೆಲುವಿನ ಚಿತ್ತಾರ!

ನಟಿ ಅಮೂಲ್ಯಗೆ ನಾಯಕಿಯ ಪಟ್ಟ ಕೊಟ್ಟಿದ್ದು ಚೆಲುವಿನ ಚಿತ್ತಾರ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಅಮೂಲ್ಯ ಲಕ್ ಬದಲಾಗಿತು. ನಂತರ ಸಿನಿಮಾರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡು, ಸಾಲು, ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ಅಮೂಲ್ಯ. ಈ ಚಿತ್ರದ ಮೂಲಕ ಅಮೂಲ್ಯ ನಾಯಕಿಯಾಗಿ 15 ವರ್ಷ ಆಗಿದೆ. ಹಾಗಾಗಿ ಸರಣಿ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಆ ದಿನಗಳನ್ನು ನೆನೆದ ಅಮೂಲ್ಯ!

ಆ ದಿನಗಳನ್ನು ನೆನೆದ ಅಮೂಲ್ಯ!

'ಚೆಲುವಿನ ಚಿತ್ತಾರ' ತಂಡವನ್ನು ನೆನೆದು ಅಮೂಲ್ಯ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. " ಚೆಲುವಿನ ಚಿತ್ತಾರ ನನ್ನ ಮೊದಲ ಸಿನಿಮಾ, ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಅದು ಅಪಾರ ನೆನಪುಗಳ ಆಗರವಾಗಿದೆ. ಅದು ನನ್ನ ಬಣ್ಣ ಹಚ್ಚುವ ಕನಸಿಗೆ ಹೊಸ ದಿಶೆ ನೀಡಿದ ಕೂಸಾಗಿದೆ. 'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ನನ್ನನ್ನು ಹೀರೊಯಿನ್ ಆಗಿ ಪರಿಚಯಿಸಿ, ಐಸೂ ಎನ್ನುವ ಹೆಸರಿನೊಂದಿಗೆ ಕನ್ನಡ ಜನತೆಯ ಮನಸ್ಸಲ್ಲಿ ಕೂರಿಸಿದೆ." ಎಂದು ಬರೆದುಕೊಂಡಿದ್ದಾರೆ.

ಎಸ್. ನಾರಾಯಣ್‌ಗೆ ಅಮೂಲ್ಯ ಧನ್ಯವಾದ!

ಎಸ್. ನಾರಾಯಣ್‌ಗೆ ಅಮೂಲ್ಯ ಧನ್ಯವಾದ!

" ಶ್ರೀ ಎಸ್ ನಾರಾಯಣ್ ಸರ್ ಅವರಿಗೂ ಹಾಗು ನನ್ನ ಎಲ್ಲಾ ಹೆಜ್ಜೆಗಳಲ್ಲೂ ಸಲಹೆ ನೀಡುತ್ತಾ ಬೆಂಬಲವಾಗಿ ನಿಂತಿರುವ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಅದಲ್ಲದೇ ಚೆಲುವಿನ ಚಿತ್ತಾರ ಅತ್ಯಂತ ಯಶಸ್ಸು ಕಾಣಲು ಕಾರಣೀಕರ್ತರಾದ ಸಿನಿಮಾ ತಂತ್ರಜ್ಞರು, ಕ್ಯಾಮೆರಾಮ್ಯಾನ್, ಮೇಕಪ್ ಮ್ಯಾನ್ ಹಾಗೂ ಮಾಧ್ಯಮ ವರ್ಗದವರಿಗೆ ಹಾಗೂ ಎಲ್ಲಾ ಅಭಿಮಾನಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಅಭಿಮಾನ, ಪ್ರೀತಿ ಹಾರೈಕೆಗಳೇ ನನಗೆ ಶ್ರೀರಕ್ಷೆ." ಎಂದು ಬರೆದಿದ್ದಾರೆ.

ನಟಿಯಾಗಿ ಯಶಸ್ಸು ಕಂಡ ಅಮೂಲ್ಯ!

ನಟಿಯಾಗಿ ಯಶಸ್ಸು ಕಂಡ ಅಮೂಲ್ಯ!

'ಚಲುವಿನ ಚಿತ್ತಾರ' ಚಿತ್ರದ ಮೂಲಕ ನಾಯಕಿಯಾದ ನಟಿ ಅಮೂಲ್ಯ, ಕನ್ನಡ ಚಿತ್ರರಂಗದ ಗೋಲ್ಡನ್​ ಕ್ವೀನ್​ ಎಂದು ಖ್ಯಾತಿ ಗಳಿಸಿದ್ದಾರೆ. ಇನ್ನು ಬಾಲ ನಟಿಯಾಗಿಯೂ ಅಮೂಲ್ಯ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಆದ ಬಳಿಕವೂ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಅಮೂಲ್ಯ ಕಮ್‌ಬ್ಯಾಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಮೂಲ್ಯಾ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಬರುತ್ತಾರಾ ನೋಡಬೇಕಿದೆ.

More from Filmibeat

English summary
15 Years For Cheluvina Chittara Movie, Actress Amulya Wrote Heat Felt Latter To S. Narayan And Team, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X