»   » ಕನ್ನಡ ಚಿತ್ರರಂಗಕ್ಕೆ ಇಂದು 'ಪವರ್' ಬಂದ ದಿನ

ಕನ್ನಡ ಚಿತ್ರರಂಗಕ್ಕೆ ಇಂದು 'ಪವರ್' ಬಂದ ದಿನ

Posted By: Naveen
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅಪ್ಪು ಅಭಿಮಾನಿಗಳು ಸದ್ಯ 'ರಾಜಕುಮಾರ' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಪವರ್ ಸ್ಟಾರ್ ಅಭಿಮಾನಿಗಳ ಈ ಖುಷಿಯನ್ನ ಮತ್ತಷ್ಟು ಹೆಚ್ಚಿಸುವ ಸುದ್ದಿ ಇಲ್ಲೊಂದು ಇದೆ.

'ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ಗೆ ಏಪ್ರಿಲ್ 26 ತುಂಬನೇ ವಿಶೇಷವಾದ ದಿನ. ಯಾಕಂದ್ರೆ, ಪುನೀತ್ ನಾಯಕನಾಗಿ ಇಂದಿಗೆ 15 ವರ್ಷ ಕಳೆದಿದೆ. ಅರ್ಥಾಥ್ ಪುನೀತ್ ಅಭಿನಯದ ಚೊಚ್ಚಲ ಸಿನಿಮಾಗೆ 15 ವರ್ಷಗಳ ಸಂಭ್ರಮ.[ಪುನೀತ್, ಯಶ್ ರನ್ನು ಶ್ಲಾಘಿಸಿದ ರಿಯಲ್ ಸ್ಟಾರ್ ಉಪೇಂದ್ರ]

ಈ ಸ್ಪೆಷಲ್ ದಿನದಲ್ಲಿ 'ಅಪ್ಪು' ಕುರಿತು ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿದೆ ಓದಿ...

ಚಿತ್ರಕೃಪೆ : ಅಪ್ಪು ಫ್ಯಾನ್ಸ್ ಕ್ಲಬ್

'ಅಪ್ಪು' ಪವರ್ ಫುಲ್ ಎಂಟ್ರಿ

ಬಾಲ ನಟನಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ 'ಅಪ್ಪು'. ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿದ್ದರು. ಇನ್ನು ಚಿತ್ರದಲ್ಲಿ ಪುನೀತ್ ಕಾಲೇಜ್ ಹುಡುಗನಾಗಿ ಪವರ್ ಫುಲ್ ಎಂಟ್ರಿ ಕೊಟ್ಟಿದ್ದರು.[ನವನಿರ್ದೇಶಕರ ಸಿನಿಮಾ ನಿರ್ಮಾಣಕ್ಕೆ ಒಲವು ತೋರಿದ ಪುನೀತ್]

ಚೊಚ್ಚಲ ಚಿತ್ರದಲ್ಲೇ ಇತಿಹಾಸ ಬರೆದ 'ಅಪ್ಪು'

ಪುನೀತ್ ಅಭಿನಯದ ಚೊಚ್ಚಲ ಚಿತ್ರವೇ ಸ್ಯಾಂಡಲ್ ವುಡ್ ನಲ್ಲಿ ಇತಿಹಾಸ ಬರೆಯಿತು. ಬರೋಬ್ಬರಿ 30 ವಾರ ಚಿತ್ರಮಂದಿದಲ್ಲಿ ಅಪ್ಪು ಸಿನಿಮಾ ಪ್ರದರ್ಶನ ಕಂಡಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ದೊಡ್ಡ ದೊಡ್ಡ ನಟರು 'ಅಪ್ಪು' ಅಭಿನಯವನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.[ಡಾ.ರಾಜ್ ಕುಮಾರ್ ಪುತ್ರ ಪುನೀತ್ ಗೆ ತಮಿಳರಿಂದ ಅಪಮಾನ.. ಅಗೌರವ.! ]

'ಅಪ್ಪು' ಟು 'ರಾಜಕುಮಾರ'

ಪುನೀತ್ ಅಭಿನಯದ ಬಹುತೇಕ ಚಿತ್ರಗಳು ಶತದಿನ ಪೂರೈಸಿದ ದಾಖಲೆ ಹೊಂದಿದೆ. 'ಅಪ್ಪು', 'ಅಭಿ', 'ಆಕಾಶ್', 'ಅರಸು', 'ವೀರಕನ್ನಡಿಗ' ಹೀಗೆ ಸಾಲು ಸಾಲು ಚಿತ್ರಗಳು ಮೇಲೆ ಒಂದು ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. 'ಮಿಲನ' ಚಿತ್ರ 1 ವರ್ಷಕ್ಕೂ ಹೆಚ್ಚ ಕಾಲ ಪ್ರದರ್ಶನ ಕಂಡಿದೆ. 'ವಂಶಿ', 'ಜಾಕಿ', 'ಹುಡುಗರು', ಇತ್ತೀಚೆಗೆ ಬಂದ 'ದೊಡ್ಮನೆ ಹುಡುಗ', 'ರಾಜಕುಮಾರ' ಸಿನಿಮಾಗಳು ಅಪ್ಪು ಕೆರಿಯರ್ ನ ಬೆಸ್ಟ್ ಸಿನಿಮಾಗಳು.[ಡಾ.ರಾಜ್ ಹುಟ್ಟುಹಬ್ಬದ ವಿಶೇಷ: 'ರಾಜಕುಮಾರ' ಚಿತ್ರತಂಡದಿಂದ ಬಂಪರ್ ಕೊಡುಗೆ]

ಪ್ರಶಸ್ತಿಗಳ ಸುರಿಮಳೆ

ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿದ 'ಮಿಲನ' ಮತ್ತು 'ಜಾಕಿ' ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಬಂದಿದೆ. ಜೊತೆಗೆ 3 ಫಿಲ್ಮ್ ಫೇರ್ ಮತ್ತು 2 ಸೈಮಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಅಪ್ಪು ಕೆರಿಯರ್ ನಲ್ಲಿದೆ.[ಅಣ್ಣಾವ್ರ ವರ್ಷನ್ ನಲ್ಲಿ ರಿಲೀಸ್ ಆಯ್ತು 'ಬೊಂಬೆ ಹೇಳುತೈತೆ' ಹಾಡು]

ಜನಪ್ರಿಯ ಗಾಯಕ

ಪುನೀತ್ ಒಬ್ಬ ಸ್ಟಾರ್ ನಟನಾಗಿ ಮಾತ್ರವಲ್ಲದೆ ಒಬ್ಬ ಜನಪ್ರಿಯ ಗಾಯಕ ಕೂಡ ಹೌದು. ಕನ್ನಡದ 50ಕ್ಕೂ ಹೆಚ್ಚು ಹಾಡುಗಳು ಪುನೀತ್ ಕಂಠದಿಂದ ಮೂಡಿಬಂದಿದೆ.[ಮೋಹಕ ತಾರೆ ರಮ್ಯಾ ಬಣ್ಣದ ಬದುಕಿಗೆ 14 ವರ್ಷಗಳ ಸಂಭ್ರಮ]

ಸರಳ ವ್ಯಕ್ತಿತ್ವ

ಪುನೀತ್ ಸಿನಿರಂಗಕ್ಕೆ ಕಾಲಿಟ್ಟ ಇಷ್ಟು ವರ್ಷಗಳಲ್ಲಿ ಯಾವುದೇ ವಿವಾದಗಳಲ್ಲಿ ಡಾ.ರಾಜ್ ಪುತ್ರನ ಹೆಸರಿಲ್ಲ. ಹಿರಿಯರನ್ನ ಮೆಚ್ಚಿಸುತ್ತಾ, ಕಿರಿಯರನ್ನ ಪ್ರೋತ್ಸಾಹಿಸುತ್ತಾ ಗುಣ ಹೊಂದಿದ್ದಾರೆ. ತಂದೆಯಂತೆ ಸರಳತೆ ವ್ಯಕ್ತಿತ್ವವುಳ್ಳವರು.

ಬ್ಲಾಕ್ ಬಾಸ್ಟರ್ 'ರಾಜಕುಮಾರ'

ಕಳೆದ ತಿಂಗಳಲ್ಲಷ್ಟೇ ಪುನೀತ್ ಅಭಿನಯದ 'ರಾಜಕುಮಾರ' ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಿರುವ ರಾಜಕುಮಾರ 50 ಕೋಟಿಗೂ ಹೆಚ್ಚು ಬಾಚಿಕೊಂಡಿದೆಯಂತೆ. ಇದು ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.['ರಾಜಕುಮಾರ'ನ ನಿಜವಾದ ಕಲೆಕ್ಷನ್ ಗುಟ್ಟು ರಟ್ಟು ಮಾಡಿದ ನಿರ್ದೇಶಕ]

ಅಭಿಮಾನಿಗಳ ಶುಭಾಷಯ

ನಾಯಕನಾಗಿ 15 ವರ್ಷವನ್ನ ಪೂರೈಸಿರುವ ಪವರ್ ಸ್ಟಾರ್ ಗೆ ಅವರ ಅಭಿಮಾನಿಗಳು ಶುಭ ಕೋರಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅಪ್ಪು ಫ್ಯಾನ್ಸ್ ಹಬ್ಬವನ್ನ ಆಚರಿಸುತ್ತಿದ್ದಾರೆ.

English summary
15 Years for Power Star Puneet Rajkumar's Appu movie. Appu is the first Movie of Puneeth Rakumar As A Hero.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X